ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ಸಾರ್ಥಕವಾಯಿತು ಎನ್ನ ಜನನಾ ಚಂದ್ರ ಪುಷ್ಕರಣಿಯ ವಾಸ ರಂಗನ್ನ ಕಂಡು ಪ ಸುತ್ತೇಳು ಪ್ರಾಕಾರಗೋಪುರ ಮಹಾದ್ವಾರ ರತ್ನದ ಕವಾಟ ತೋರಣಗಳು ಕತ್ತಲೆ ಹರನಂತೆ ಕಣ್ಣಿಗೆ ತೋರುತಿದೆ ತುತ್ತಿಸಲಳವೆ ಅನಂತ ಜನುಮಕೆ 1 ಸಾಲು ಬೀದಿಗಳು ಒಂದೊಂದರ ಮಧ್ಯದಲಿ ಸಾಲು ಮಂಟಪ ಮುತ್ತಿನ ಚಪ್ಪರಾ ಕೀಲುಮಣಿಗಳಿಂದ ಬಿಗಿದ ಸೊಬಗು ಹೊಂ ಬಾಳೆಸ್ತಂಭಗಳೆಡಬಲದಲ್ಲಿ ಒಪ್ಪಲು 2 ಮುಂದೆ ಗರುಡಗಂಭ ಪವಳದ ಗವಾಕ್ಷಿ ಹಿಂದೆ ನೆರೆದ ಬಲು ಪರಿಯಂಗಡಿ ಸಂದಣಿಯಿಂದ ಭೂಸುರರು ಸ್ತೋತ್ರವ ಪೇಳೆ ಒಂದೊಂದು ಬಗೆಯಲ್ಲಿ ವಂದಿಸುವುದು ಕಂಡು 3 ಚಂದನ್ನನಿಂದೆ ಪೋಗಾಡಿದ ಸರೋವರ ಒಂದು ಸುರವನ್ನೆ ವೃಕ್ಷದಲ್ಲಿ ಮಿಂದು ಸಜ್ಜನರು ಕೈಗಳ ಮುಗಿದು ನಮೊ ಎಂದು ಕೊಂಡಾಡುವರು ವೇಗದಲ್ಲಿ 4 ಪ್ರಣವಾಕಾರವಾದ ವಿಮಾನ ಅದರ ಮೇಲೆ ಮಿನುಗುವ ವಾಸುದೇವಾದಿಗಳ ಮನದಣಿಯ ಕೊಂಡಾಡಿ ಮುದದಿಂದ ಪಾಡುತ್ತಾ ಫಣಿ ತಲ್ಪನಾಥ ಶ್ರೀ ಪರಮಪುರುಷನ ಕಂಡು 5 ಕಮಲಾಕ್ಷ ಕುಳಿರತೆರದಿ ಕದಪು ಕರ್ಣ ಕುಂಡಲ ಉರದಲ್ಲಿ ಕೌಸ್ತುಭ ಹಾರ ಪದಕ ಪಾವನ ಪಾದಾ6 ನಸುನಗೆ ಚತುರ್ದಶ ಲೋಕವ ಬಿಸಜ ಕರಗಳು ಭೂಷಣದಿಂದಲಿ ಬಿಸಜ ಭವನ ಪಡೆದು ನಾಭಿ ವಸನಕಟಿ ಮಿಸುಣಿಪ ವಡ್ಯಾಣ ಸರ್ವ ಲಕ್ಷಣನಾ 7 ಕಾಲ ಕಡಗ ಪೆಂಡೆ ಪೊಂಗೆಜ್ಜೆ ಅಂದಿಗೆ ವಾಲಾಯ ಪದತಳದಲಿ ರೇಖೆ ವಾಲಗ ಸಿರಿದೇವಿ ಪ್ರೀತಿಯಿಂದಲೆ ಮಾಡೆ ಸುರರು ಸಮ್ಮುಖದಲಿ ನುತಿಸೆ 8 ಉಭಯ ಕಾವೇರಿ ನಡುವೆಯಿದ್ದು ದಕ್ಷಿಣ ಅಭಿಮುಖವಾಗಿ ಪವಡಿಸಿದ ವಿ ಭೀಷಣದ ವರದ ರಂಗ ಮಂದಿರ ನಿಲಯಾ ವಿಬುಧೇಶ ವಿಜಯ ವಿಠ್ಠಲ ರಂಗನ ಕಂಡು9
--------------
ವಿಜಯದಾಸ