ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದು ನಿನ್ನ ಪಾದಕಮಲವಾ | ಪೊಂದಿದೆ ದೇವಾ ಪ ಪುರಂದರಾನುಜ | ಸಿಂಧೂರ ವರಪೋಷಕ ಸುರ ವಿನುತ ಇಂದಿರೇಶಾ ಅ.ಪ ಪಿತನೆ ನಿನ್ನ ಒಮ್ಮೆ ನೆನೆಯದೆ | ಮತಿಹೀನನಾಗಿ ಸ್ಮøತಿ ಪುರಾಣ ಕಥೆಯ ಕೇಳದೆ | ವಿತತ ಮಹಿಮ ಪತಿತ ನಾನಾದೆ ಅತಿವೇಗದಿ ಎನ್ನನು ನೀ ಹಿತದಿ ಪಾಲಿಸು ಕ್ಷಿತಿಜೇಶನೆ 1 ವಿಧಿಸುರೇಂದ್ರವಂದ್ಯ ನಗಧರ ಬಿಡದೆ ಸಲಹೊ ಮದನವಿತ ನೀನಧಮ ದೈತ್ಯರ ಮದವಳಿದು ಮುದದಿ ಒದಗಿದ ಸುಧೆಯನು ಸುರರಿಗೆ ನೀ ದಯದಿಕ್ಕಿದ ಪದುಮನಯನಾ 2 ಸಿಂಧುಶಯನ ಶಾಮಸುಂದರ ವಂದಿಸುವೆ ಕಂದುಗೊರಳ ಸಖ ಶ್ರೀಮನೋಹರ ಕಂದನೆಂದೀಮಂದಭಾಗ್ಯನ ತಂದೆಯ ಮರೆಯದೆ ನೀ ಚಂದದೀ ಪೊರೆ ದಶಕಂಧರಾರಿ 3
--------------
ಶಾಮಸುಂದರ ವಿಠಲ
ಜಗದಂಬಿಕೆ ಪೊರೆ | ಭವಾನಿ | ಅಘಸಂಹರೆ | ಲೋಕೈಕ ಮಾತೆ ಪ. ಪರಮ ಪಾವನೆ | ಗೌರಿ ಮನೋಹರೆ || ಪರಮೇಶ್ವರಿ | ಕರುಣಾಕರೆ ಶ್ರೀಅ.ಪ. ಸುಂದರಾಂಗಿಯೆ || ಚಂದದೀ ಪೊರೆ | ಚಂದ್ರಚೂಡಪ್ರಿಯೆ1 ಆದಿಶಕ್ತಿ ದೇವಿ ಆದಿನಾರಾಯಣಿ | ಮೋದದೀ ಪೊರೆ | ಮೋದದಾಯಕಿಯೆ2 ಶಂಖಚಕ್ರಧರೆ | ಕಿಂಕರಪ್ರಿಯಕರೆ || ವೆಂಕಟೇಶನಾ | ಸೋದರಿ ಶಂಕರಿ3
--------------
ವೆಂಕಟ್‍ರಾವ್
ಪರಿಪಾಲಿಸುವುದು ಎಮ್ಮನು ಪರಮಾತ್ಮನ ರಾಣಿ ಕರುಣಾಕರನ ಪಾದಸ್ಮರಣೆಯನೆ ಕೊಟ್ಟು ಪ ಅಮರೇಶ ವಂದ್ಯಳೆ ಕಮಲಾಲಯೆ ನೀಬಂದು ಶ್ರಮವಿಲ್ಲದೆಯನ್ನೆಯ ಮಮತೆಯನು ಬಿಡಿಸು 1 ವಸುದೇವಸುತನ ರಾಣಿ ಅಸುರ ಸಂಹಾರಳೇ ನಿನ್ನ ವಶವಾದ ಮೇಲೆ ಅಂಭ್ರಣಿಯೆ ನಸುನಗುತ ಈಗ 2 ಮಂದರೋದ್ಧಾರಎನ್ನ ಸಂದುಸಂದಲಿ ಕಾರ್ಯವ ನಿಂದುಮಾಡಿಸುವಂಥದನ್ನು ಚಂದದೀಬೋಧವಕೊಟ್ಟು 3 ಮಂಗಳಾಂಗಿಯೆ ನಿನ್ನ ಮುಂಗಾಣದೆಸೊರಗಿದೆ ಅಂಗಜಪಿತನ ಜಾಯೇ ಭಂಗಪಡಿಸದೆಬೇಗಾ 4 ಪದ್ಮಸಂಭವನಮಾತೆ ಮುದ್ದುಮೋಹನವಿಠಲ ಪದ ಪದ್ಮಗಳನೀನೊಲಿದು ಹೃತ್ಪದ್ಮದಲಿ ಕಾಣಿಸುತ 5
--------------
ಮುದ್ದುಮೋಹನವಿಠಲದಾಸರು