ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಬರಿದೆ ಮೋಹದೊಳು ಬೆರೆದೆ ನಮ್ಮ ಗುರುವಾದಿರಾಜಾರ್ಯ ಚರಣಗಳ ಮರೆದೆ ಪ. ಸರ್ವಜ್ಞಗುರುಮತವ ನಿರ್ವಹಿಸಿ ಮಾಯಿಗಳ ಗಣಪತಿಶಕ್ತಿ ಪೂರ್ವದೇವತೆಗಳನು ಸರ್ವ ಪರರೆಂದೊರೆವ ದುರ್ವಾದಿಗಳ ಭಂಗಿಸಿ ಹಯವದನ- ಪರ ದೈವವೆನಿಸಿ ಮೆರೆವಂಥ ಪಾರ್ವತೀವರವಂದ್ಯಪದ ಪಾತ್ರನೆನಿಸದೆ 1 ಅಂತರ್ಬಹಿಃಶತ್ರು ಸಂತತಿಯ ಗೆಲುವ ತೋರಿಸುವ ಚಂತಿತಾಭೀಷ್ಟಗಳ ಪರಮಾಂತರಂಗದಿ ಕೊಡುವ ಕಂತುಕೃತ ಬಾಧೆಯನ್ನು ನಿಲದಂತೆ ಸಂತೈಸಿಸುವರನ್ನು ಕಾವ ಕ- ಲ್ಪಾಂತದಲಿ ಪವಮಾನನಾಗುವನ ಮರೆದೆ 2 ಮೂರಾರು ಎಂಬತ್ತು ಭಾರಿ ಕಲ್ಪಗಳಲ್ಲಿ ಶ್ರೀ ರಮಾರಮಣಪದ ವಾರಿಜಗಳನು ಭಜಿಸಿ ತೋರಿ ವೈಷ್ಣವ ತತ್ವ ಸಾರವನು ಸಮಧರಿಸಿ ಮಾರುತನ ಮತವೆ ಮಧುವೈರಿಪ್ರಿಯಕರವೆನಿಸಿ ಧೀರ ಕವಿ ಶುಭಕರವಜ್ಞಾನ ಸುಖ ಸಾರ ವೆಂಕಟಪತಿಯ ಮನದಿ ಧರಿಸಿರುವ 3
--------------
ತುಪಾಕಿ ವೆಂಕಟರಮಣಾಚಾರ್ಯ