ಕೈಯ ಮುಗಿವೆನು ಮಹಾಲಿಂಗ ಜಗ-
ದೈಯನೆ ವೃಷಭತುರಂಗ ಪ.
ಧೈರ್ಯಸಾಹಸ ಸಮುದ್ರ ರುದ್ರ ಸುರ-
ವರ್ಯನೆ ಸದಯಾಪಾಂಗ ಅ.ಪ.
ಕೆಂಡಗಣ್ಣಿನ ಪರಶಿವನೆ ಸುಪ್ರ-
ಚಂಡ ಚಂಡಿಕಾಧವನೆ
ಮಂಡೆಯೊಳಗೆ ಭಾಗೀರಥಿಯ ತಾಳ್ದ
ಕಂಡಪರಶು ಪಾವನನೆ 1
ಚಂದ್ರಕಲಾಧರ ಹರನೆ ಗೋ-
ವಿಂದನ ವರ ಕಿಂಕರನೆ
ಸುಂದರ ಶುದ್ಧಸ್ಫಟಿಕಶರೀರನೆ
ವೃಂದಾರಕ ಮುನಿವೃಂದವಂದಿತನೆ2
ಪಾವಂಜೆ ಕ್ಷೇತ್ರವಾಸ ಪರಿ-
ಪಾಲಿಸು ಫಣಿಪತಿಭೂಷ
ದೇವ ಲಕ್ಷ್ಮೀನಾರಾಯಣದಾಸನ
ಕಾವ ಕಲ್ಮಷವಿನಾಶ 3