ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಣೆವಾವಿದನು ಕಾಣೆವಾವಿದನಾವ ಶಾಸ್ತ್ರದಲಿ ವಿದುಗಳ ಪ್ರಮಾಣ ವಚನದಲಿ ಮೂರನೆಯ ಪಥದಾಪಜಾಣಿಲಾತ್ಮನ ಸಮಾಧಿಯಲನುಭವಿಸಿ ಸುಖವಕಾಣದೆ ಬರಿದೆ ಮುಕುತರಾವೆಂಬ ಪರಿಯಾ ಅ.ಪತಾನೆ ಚೇತನವಂತೆ ತನಗೆ ಕರ್ಮಗಳಂತೆತಾನೆ ಸುಖಮಯನಂತೆ ತಾಪವನಂತೆತಾನೆ ಬೋಮವದಂತೆ ಹಾನಿವೃದ್ಧಿಗಳಂತೆತಾನೆ ನಿರ್ಲೇಪಸ್ತುತಿನಿಂದೆ ತನಗಂತೊ 1ಬೋಧೆಯು ತಾನಂತೆ ಸಾಧನವು ಬೇಕಂತೆಭೇದವಿಲ್ಲವದಂತೆ ಭೀತಿ ತನಗಂತೆನಾದ ಬಿಂದುಗಳನರಿದಿಪ್ಪಗತಿಯಂತೆಪಾದಾಭಿಮಾನ ಚಿಂತೆಯು ಪೋಗದಂತೆ 2ಕಾಯ ಕರುಣಾಭಿಮಾನಗಳಿಲ್ಲ ತನಗಂತೆಮಾಯೆ ಬಾಧಿಪುದಂತೆ ಮನಸಿನೊಳಗೆಈಯಹಂಕಾರವಿಲ್ಲದ ಬೊಮ್ಮಪದವಂತೆಹೇಯವಿದುಪಾದೇಯವೆನಿಪ ಭ್ರಮೆಯಂತೆ 3ಈಶ ತಾನಂತೆ ತನ್ನಾಶೆಗಳು ಬಿಡವಂತೆಕೋಶ ಸಾಕ್ಷಿಕನಂತೆ ಕೋಪ ತನಗಂತೆಪಾಶವಿಲ್ಲವದಂತೆ ಪಾಡುಪಂಥಗಳಂತೆಈ ಸಕಲ ತಾನಂತೆ ಇನ್ನು ವಿಧಿಯಂತೆ 4ಚೇತನವೆ ತಾನಂತೆ ಚಿತ್ತನಿಲ್ಲದುದಂತೆಪಾತಕಗಳಿಲ್ಲವಂತೆ ಪರಪೀಡೆಯಂತೆಜಾತಿಸೂತಕವೆಂಬ ಜಂಜಡಗಳಿಲ್ಲವಂತೆಮಾತಿನ ರಿಪು ಮತ್ಸರಗಳು ಬಿಡವಂತೆ 5ವಿಶ್ವಾತ್ಮತಾನೆಂಬ ವಿಶ್ವಾಸವುಂಟಂತೆವಿಶ್ವತ್ರೈಜಸರ ನಿಜವರಿಯನಂತೆನಶ್ವರದ ಭೋಗಂಗಳೆಂಬ ನಂಬಿಗೆಯಂತೆವಿಶ್ವಾದಿಗಳ ರೀತಿಯಲ್ಲಿ ಪಗೆಯಂತೆ 6ಅಂಡಪಿಂಡಗಳೈಕ್ಯವೆಂಬ ಬುದ್ಧಿಗಳಂತೆಚಂಡಾಲನಿವನೀತ ಮೇಲೆಂಬುದಂತೆಪಂಡಿತನು ಪ್ರವುಢ ತಾನೆಂಬ ಭಾಷೆಗಳಂತೆಕುಂಡಲಿಯ ಹೆಳವ ಕೇಳ್ದಡೆ ಕುದಿವನಂತೆ7ಚಿನ್ಮಯಾತ್ಮಕನು ತಾನೆಂಬ ಚಿಂತೆಗಳಂತೆತನ್ನವರು ತಾನೆಂಬ ಭ್ರಮೆಪೊಗದಂತೆಸನ್ಮುದ್ರೆಯಂತೆ ಸತ್ಯಾಸತ್ಯವೆರಡಂತೆತನ್ಮಯತೆಯಂತೆ ಲಕ್ಷಣೆಯರಿಯನಂತೆ 8ಗುರುಭಕುತಿಯಂತೆ ವರಕರುಣವಿಲ್ಲವದಂತೆಗುರುಶರಣನಂತವರನುಗೇಳನಂತೆಪರಮಪದ ತಾನಂತೆ ಪಿರಿದು ಸಂಶಯವಂತೆವರ ಮುಕ್ತಿಯಂತೆ ವಾಸನೆಯು ಬಿಡದಂತೆ 9ಈ ಪರಿಯ ಸಂಭಾವನೆಗಳ ಪರಿಹರಿಸಿ ಶ್ರೀಗೋಪಾಲಾರ್ಯ ಜನರಿಗೆ ದಯದಲಿತಾಪಂಗಳನು ಸವರಿ ದಾಟಿಸಯ್ಯಾ ಚಿತ್ಪ್ರತಾಪದಿಂ ನಿಜಪಾದ ಬೋಧೆಯನು ಕೊಟ್ಟು10
--------------
ಗೋಪಾಲಾರ್ಯರು
ನಾಟಕ ರಂಗದಲಿ ನಟಶಿರೋಮಣಿಯೊಬ್ಬ ಪಟುತನದಿ ವಿಧವಿಧನ ನಟನೆಗಳ ತೋರುವನು ಪ ಅಘಟನಾಘಟನ ಶಕ್ತನ ಕಪಟನಾಟಕವು ಘಟಕರಲ್ಲದ ಜನಕೆ ಎಟುಕದಾನೋಟ ಅ.ಪ ಮುಖ್ಯಪಾತ್ರವು ನಮ್ಮ ರುಕ್ಮಿಣಿ ರಮಣನದು ಮುಖ್ಯತಾರೆಯು ಲೋಕ ಜನನಿ ಲಕುಮಿ ಇಕ್ಕಿದನು ಗೋರೂಪ ಚತುರಾನನನು ಮುದದಿ ಮುಖ್ಯಪ್ರಾಣನೆ ತುರಗ ಮುಕ್ಕಣ್ಣ ಕರುವಾದ 1 ಸುಖಸಾರನನು ಪಡೆದು ಧನ್ಯಳಾದ ಯಶೋದೆ ಬಕುಳೆಯೆ ತಾನಾದಳೀ ನಾಟಕದಲಿ ಅಕಳಂಕ ಮಹಿಮನನು ಅಗಲದಿದ್ದ ಸತಿಯು ಮುಖನೋಡಿ ಕೋಪದಲಿ ಕಲ್ಲುಗಳನೆಸೆದಳು 2 ಸರ್ವತ್ರ ವ್ಯಾಪ್ತನಿಗೆ ಇರಲು ಜಗವು ಸಿಗದೆ ಕಿರಿದ ತಾ ಹಲ್ಲುಗಳ ವರಹನಲ್ಲಿ ಹರನ ತಾತನು ತಾನು ಸ್ಮರನ ಬಾಣದಿ ನೊಂದ ಸುರಮೋಹಿನಿಯು ಇಂಥ ಕೊರವಂಜಿಯಾದಳು3 ಹುಟ್ಟಿಸುವ ಬೊಮ್ಮನನು ಪುಟ್ಟಶಿಶುವನೆ ಮಾಡಿ ಹೊಟ್ಟೆಗಿಲ್ಲದೆ ಬಹಳ ಬಾಡಿ ಇರಲು ಮೃಷ್ಟಾನ್ನವನು ಚಿನ್ನ ತಟ್ಟೆಯಲಿ ತಂದಿಡಲು ಶ್ರೇಷ್ಠವಿದು ಜನನಿಗೆನ್ನುತ ತಿಂದು ತೇಗಿದಳು 4 ಬಡುಕನೆದೆಗೊದೆಯಲವನಡಿಗಳಿಗೆ ಶರಣೆಂದ ಕಡು ಕೋಪಿ ಗೋವಳನ ಕೊಡಲಿಗೊಡ್ಡಿದ ಶಿರವ ಹಿಡಿ ಮಣ್ಣು ಪಿಂಡಗಳನಿತ್ತ ಚಂಡಾಲನಿಗೆ ಸಡಗರದಿ ಲಕುಮಿಯನೇ ಕರದಲಿತ್ತ ಪ್ರಸನ್ನ 5
--------------
ವಿದ್ಯಾಪ್ರಸನ್ನತೀರ್ಥರು
ಕಾಳಬೆಳದಿಂಗಳು - ಈ ಸಂಸಾರ -ಕತ್ತಲೆ ಬೆಳುದಿಂಗಳು ಪ.ಸತ್ಯಕೆ ಧರ್ಮಜ ಲೆತ್ತ ಪಗಡೆಯಾಡಿ |ವ್ಯರ್ಥ ಭಂಢಾರವೆಲ್ಲವನು ಸೋತು ||ಬತ್ತಲೆ ಪೋಗಿ ವಿರಾಟನ ಮನೆಯೊಳು |ತೊತ್ತಾದಳು ದ್ರೌಪದಿ ಒಂದು ವರುಷ 1ಉಂಬಾಗ ಉಡುವಾಗ ಕೊಂಬಾಗ ಕೊಡುವಾಗ |ಬೆಂಬತ್ತಿ ತಿರುಗುತಲಿಪ್ಪರು ||ಎಂಬಾತಗೆ ನೋಡಿ ಬಡತನ ಬಂದರೆ |ಇಂಬಿಲ್ಲ ಅತ್ತತ್ತ ಹೋಗೆಂಬರಯ್ಯ 2ಉಂಟಾದ ಕಾಲಕ್ಕೆ ನೆಂಟರಿಷ್ಟರು ಬಂದು |ಬಂಟರಂತೆ ಬಾಗಿಲ ಕಾಯ್ವರು |ಉಂಟುತನವು ಪೋಗೆ ಅಂತ್ಯಕಾಲಕೆ ಕಂಡು |ಹೆಂಟೆಯಾಗಿ ತಿರುಗುತಿಪ್ಪರಯ್ಯ 3ಪುಂಡರೀಕಾಕ್ಷ ಶ್ರೀ ಪುರುಷೋತ್ತಮ ರಥ - |ಕೊಂಡು ಸಾರಥಿಯಾದ ಫಲ್ಗುಣನ ||ಮಂಡಲವಾಳವ ಹರಿಶ್ಚಂದ್ರರಾಯನು ||ಕೊಂಡು ಕಾಯ್ದ ಚಂಡಾಲನ ಮನೆಯ 4ನೊಂದಿತು ಕಾಯವು ಬೆಂದಿತುಒಡಲು |ಬೆಂದ ಒಡಲಿಗಾಗಿ ಹಾಸ್ಯಮಾಡಿ ||ಪುಂಡರೀಕಾಕ್ಷ ಶ್ರೀ ಪುರಂದರವಿಠಲನ |ತೊಂಡನಾಗಿ ನೀ ಸುಖವಾಗಿ ಬಾಳು 5
--------------
ಪುರಂದರದಾಸರು