ಪೂರ್ಣಿಮೆಯ ದಿನ
(ಗರುಡ ದೇವರನ್ನು ಕುರಿತು)
ರಂಭೆ :ಮಂದಗಮನೆ ಪೇಳಿದಂದವನೆಲ್ಲ ಸಾ-
ನಂದದಿ ತಿಳಿದೆನೆ ಬಾಲೆ
ವಾಹನ ವೇರಿ
ಮಂದರಧರ ಬಹನ್ಯಾರೆ1
ಅಕ್ಕ ನೀ ಕೇಳಲೆ ರಕ್ಕಸವೈರಿಯ
ಪಕ್ಕದ ಮೇಲೇರಿಸುತ
ಅಕ್ಕರದಿಂದ ಕಾಲಿಕ್ಕಿ ಬರುವನೀತ
ಹಕ್ಕಿಯಂತಿಹನೆಲೆ ಜಾಣೆ2
ಘೋರನಾಸಿಕದ ಮಹೋರಗ ಭೂಷಣ
ಧಾರಿವನ್ಯಾರೆಂದು ಪೇಳೆ
ಮಾರಜನಕಗೆ ವಾಹನನಾಗುವನೀತ
ಕಾರಣವೇನೆಂದು ಪೇಳೆ3
ಊರ್ವಶಿ : ಈತನೆ ಮಹಾತಿಬಲ ಕಾಣೆ ಶ್ರೀವಿಷ್ಣುವಿಂಗೆ
ಕೇತನನಾದ ಪುನೀತನೆಲೆ ಜಾಣೆ
ಭೀತಿರಹಿತವಿಖ್ಯಾತಿ ಸರ್ಪಾ-
ರಾತಿ ಸೂರ್ಯಾನ್ವಯನ ಬಲಗಳ
ಚೇರಿಸಿದ ನಿಷ್ಕಾತುರನ ಹರಿ
ಪ್ರೀತ ವಿನತಾ ಜಾತ ಕಾಣಲೆ4
ಗಂಡುಗಲಿ ಮಾರ್ತಾಂಡತೇಜಮಖಂಡ
ಬಲನಿವನು ಮಾತೆಯ
ಚಂಡವಿಕ್ರಮನು ನೇಮವ
ತಂಡವೆಲ್ಲವನು ಕೋಪದಿ
ನಂಡಲೆದು ಕರದಂಡನಾಭನ
ಕೊಂಡುಬಂದವನಂಡಜಾಧಿಪ5
ಭೂರಿವೈಭವದಿ ಗರುಡನ
ದಯದಿ ತೋರುತ
ರವದಿ ಸನಕ ಸ-
ಚಾರುಚರಣವ ತೋರಿ ಭಕ್ತರ
ಶ್ರೀರಮಾಧವ ಮಾರಜನಕನು6