ಒಟ್ಟು 6 ಕಡೆಗಳಲ್ಲಿ , 3 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಚಿತ್ರಾಪುರದ ದುರ್ಗಾ) ಚಿತ್ರಾಪುರ ನಾಯಕಿ ಪಾಲಿಸು ನಮ್ಮ ಗೋತ್ರ ವೃದ್ಧಿದಾಯಕಿ ಭ್ರಾತ್ರವ್ಯ ಭಯದಿಂದ ಭಜಿಸಿದ ವಿಧಿಯ ಸ್ತೋತ್ರಕೊಲಿದ ಮೊದಗಾತ್ರದೇವನ ರಾಣಿ ಪ. ಸರ್ವಮಂಗಲೆ ನಿನ್ನನು ಕಾಣಲು ಕಷ್ಟ ಪರ್ವತ ಪುಡಿಯಾದುದು ಶರ್ವ ಸುರೇಂದ್ರಾದಿ ಗೀರ್ವಾಣವಂದ್ಯೆ ನೀ ನಿರ್ವಹಿಸುವುದೆನ್ನ ಸರ್ವಕಾರ್ಯಗಳನ್ನು 1 ಕ್ಷುದ್ರರ ಮೋಹಿಸಲು ಹರಿಯು ನಿದ್ರಾ ಮುದ್ರೆಯ ಧರಿಸಿರಲು ರೌದ್ರ ರಕ್ಕಸ ಮಧುಕೈಟಭರನು ಕರು- ಣಾದ್ರ್ರ ಹೃದಯದಿಂದ ಕೊಲಿಸಿದ ಪತಿಯಿಂದ 2 ವಹಿಸಿದೆ ಸಕಲವನ್ನೂ ಸಹಿಸದ ಶತ್ರು ಪುಂಜಗಳನ್ನು ತ್ವರಿತದಿ ದಹಿಸು ದಾಸನೆಂದು ಗ್ರಹಿಸೆನ್ನ ಪಾಲಿಸು 3 ಚಂಡಮುಂಡರ ಶಿರವ ಕತ್ತರಿಸುತ ಚಂಡನಾಡಿದ ಭರವ ಕಂಡು ಮನಕೆ ರೋಷಗೊಂಡು ದೈತ್ಯರ ರಕ್ತ ಹಿಂಡಿ ದೇಹವ ತುಂಡು ತುಂಡು ಮಾಡಿದ ಧೀರೆ 4 ತಪ್ಪುಗಳೆಣಿಸದಿರೇ ಶೇಷಾದ್ರೀಶ- ನೊಪ್ಪಿದ ಗುರುವ ತೋರೆ ಅಪ್ಪಿಳಿಸರಿಗಳ ಚಿಪ್ಪನುಳಿಯದಂತೆ ತಪ್ಪಿಸು ಭಯವ ತಿಮ್ಮಪ್ಪನ ರಾಜನ ನೀರೆ 5
--------------
ತುಪಾಕಿ ವೆಂಕಟರಮಣಾಚಾರ್ಯ
ಕರುಣಾಲವಾಲ ಜಿಷ್ಣುಪರಿಪಾಲ ವಿಷ್ಣು ವಿಶ್ವವ್ಯಾಪಿಸಕಲ ದೃಷ್ಟಾದೀಶ ಕೃಷ್ಣಲೋಲ ಪ. ಪೊಳೆವ ಗರುಡ ಸ್ಕಂಧವೇರಿ ಘಳಿರನೆ ಪೋಗಿ ಜಲಜವ ಹರಿಸೆ ದೈತ್ಯ ಬಲವಕೊಂಡು ಬಂದ ಮುರನ ಥಳಥಳಿಪ ಚಕ್ರದಿಂದ ತಲೆಯ ಭೂಮಿಗಿಳಿಸಿ ಮೆರೆದ 1 ಧುರದಿ ಮಂತ್ರಿ ಸುತರ ತರಿದು ಕರಿಯನೇರಿ ಖತಿಯ ತಾಳ್ದ ನರಕನನ್ನು ನಳಿನಾಂಬಕಿಯ ಕರದಿ ಭಂಗಿಸಿ ಸರಸಿಜ ಸಂಭವದತ್ತ ವರದಿ ಸಕಲ ಸುರರ ಗೆಲಿದ ಗರುವನನ್ನು ನಿಲಿಸಿ ಕ್ಷಣದಿ ಶಿರವ ಚಂಡನಾಡಿದವನೆ 2 ಧಾತ್ರಿದೇವಿ ಬಂದು ನಾನಾ ಸ್ತೋತ್ರ ಗೈಯೈ ಕರುಣದಿಂದ ಪಾತ್ರಗೊಲಿದು ಸತ್ರಾಜಿತನ ಪುತ್ರಿ ಒಡಗೊಂಡು ಸುತ್ರಾಮ ಮಂದಿರವನೈದಿ ಚಿತ್ರ ತಾಟಂಕಗಳ ದಿತಿಗೆ ಪುತ್ರ ತಾನೆಂದಿತ್ತ ಶ್ರೀಕಳತ್ರ ನಿನ್ನ ನಂಬಿರುವೆನು 3 ಸೌಂದರ್ಯಸಾರೈಕ ನಿಲಯಾ ನಂದಬೋಧಾಧಾರಮೂರ್ತಿ ಇಂದಿರಾವತಾರೆ ಭಾಮೆ ಎಂದ ನುಡಿ ಕೇಳಿ ಮಂದಹಾಸದಿಂದ ನಗುತ ಮಂದವಾಯು ಸುಳಿವ ಸುರರ ನಂದನದೊಳಿಂದುಕಿರಣ ಛಂದದೊಳಾನಂದಗೊಂಡ 4 ವಾರಿಜಾಕ್ಷಿಯೆಂದ ನುಡಿಗೆ ಧೀರತನವ ತೋರಿ ದೇವ ಪಾರಿಜಾತ ವೃಕ್ಷವ ಸರ್ಪಾರಿ ಮೇಲಿರಿಸಿ ಸಾರೆ ಸ್ವರ್ಗನಾಥ ಸ್ವಪರಿವಾರ ಸಹಿತ ತಡಿಯೆ ಗೆದ್ದು ದ್ವಾರಾವತಿಗೆ ಪೋಗಿ ಮೆರದ ನೀರಜಾಕ್ಷ ವೆಂಕಟೇಶ 5
--------------
ತುಪಾಕಿ ವೆಂಕಟರಮಣಾಚಾರ್ಯ
ಚಂಡನಾಡಿದ ರಘುಕುಲ ನಂದನಾಶ್ರಿತವತ್ಸಲ ಪ ಇಂದುಮುಖಿ ಸೀತಾದೇವಿ ಸುಂದರ ಕರಕಮಲಾರ್ಪಿತಮಾದ ಅ.ಪ. ಸೇವಂತಿ ಪರಿಚಿತಮಾದ ಮಾಲ ವಿರಚಿತ ಮಾದ 1 ಪಂಕಜನೇತ್ರಿಯು ಶಂಕಿಸದಿರಲು ಪೊಗಳಲು ಚಂಪಕ ದರಳಿÀನ 2 ಸುರಜಾಲ ಜಯ ಜಯವೆನ್ನಲು ಧೇನುನಗರ ಶ್ರೀ ರಾಮನು ಮುದದಿ 3
--------------
ಬೇಟೆರಾಯ ದೀಕ್ಷಿತರು
ಚಂಡನಾಡಿದ ಹರಿ ಚಂಡನಾಡಿದ ಪ ಪುಂಡರೀಕ ಕುಸುಮಮಯದ ಅ.ಪ. ಸಾರ ಸೊಬಗಿನಿಂದ ನೋಡಿ ಕರವ ನೀಡಿ ಪಾರಿಜಾತ ಕುಸುಮಮಯದ 1 ಸೊಂಪಿನಿಂದ ಮಂದಹಾಸ ಪೆಂಪುದೋರೆ ಸಿರಿಯಮ್ಮೆ ಗಂಪಿನಿಂದ ರಮೆಯು ಸಹಿತ ಚಂಪಕದ ಕುಸುಮಮಯದ 2 ಪುಲ್ಲನಯನ ಪರಿಮಳವ ಚೆಲ್ವ ಚಂದ್ರ ಕಿರಣದಂತೆ ಚೆಲ್ವನಾಂತ ಸರಸಮಾನ ಮಲ್ಲಿಗೆಯ ಕುಸುಮಮಯದ 3 ದಿವ್ಯ ಮಾಧುಪ ಝೇಂಕೃತಿಯು ಭವ್ಯಮಾಗೆ ದಿವಿಜರೆಲ್ಲ ದಿವ್ಯಮೆಂದು ಪೊಗಳೆ ಸುಖದಿ ನವ್ಯ ಜಾಜಿ ಕುಸುಮಮಯದ 4 ಶ್ರೀನಿವಾಸ ಸಕಲ ಹೃದಯ ಶ್ರೀನಿವಾಸ ಧೇನುನಗರಶ್ರೀನಿವಾಸ ವೆಂಕಟೇಶ ಶ್ರೀನಿವಾಸ ಕುಸುಮಮಯದ 5
--------------
ಬೇಟೆರಾಯ ದೀಕ್ಷಿತರು
ಚಂಡನಾಡಿದನು ಶ್ರೀರಘುವರ ಪ ಪುಂಡರೀಕಾಕ್ಷನು ಭೂಮಿ ಸುತೆಯ ಸಹಿತ ಅ.ಪ ಸರಸಿಜ ದಳದಂತೆ ಮೆರೆಯುವ ಹಸ್ತದಿ ಪರಿಪರಿ ಪುಷ್ಪಗಳ ಪಿಡಿದು ಸಂಭ್ರಮದಿಂದ 1 ವರರತ್ನ ಮುಕ್ತ ಭಾಸುರ ಪುಷ್ಪಮಯವಾದ 2 ಕಾಮ ಕೋಟಿ ಲಾವಣ್ಯ ಕಾಂತೆಯೊಡನೆ ಬಲು ಪ್ರೇಮದಿಂದಲಿ ಗುರುರಾಮವಿಠಲ ತಾನು 3
--------------
ಗುರುರಾಮವಿಠಲ