ಕರವೇ ವಂದಿಸಿ-ನಮಸ್ಕರಿಸಿ ಮಾತನುಸುರುವೆ ಪ
ಪರಮಾದರದಲಿ ಕರುಣ ಎನ್ನ ಮೇಲೆ
ಹರಹಿ ದುರುಮತಿಯ ಪರಿಹರಿಸುವುದು ಅ.ಪ.
ವಾತತನಯ ವಾರಿಜಾತ ಬಾಂಧವ ಸಂ
ಭೂತ ಸಹಾಯ ರಘುನಾಥನ್ನ ಪ್ರಿಯದೂತ
ಶಾತಕುಂಭ ಮಕುಟ ಶೀತಕರ ಕುಂಡಲ-
ತೀತ ಸುಂದರ ಕಾಯ-ಜಾತ ಶರವರ್ಜಿತ
ದಾತನಿಂದಲಿ ಬಹಳಾತುರದಲಿ ಗು-
ರುತು ಪಡೆದು ನಿರ್ಭೀತನಾಗಿ ಪೋಗಿ
ಮಾತೆಗೆರಗಿ ಖಳವ್ರಾತವ ಘಾತಿಸಿ
ಪ್ರೀತಿಯಿಂದಲಿ ನಿಜರಾತಿಯ ತಣಿಸಿದ 1
ಉದ್ದಂಡ ವಿಷವನುಂಡು
ಕುಂಡಲಿಯಿಂದ ಕೈಗೊಂಡು ಮನ್ನಣೆಯ
ಚಂಡಗದೆಯ ದಿಟ್ಟ ಗಂಡುಗಲಿ ಪ್ರಚಂಡ
ಹಿಂಡು ಖಳರ ಶಿರ ಚೆಂಡಾಡಿ ಗುರು ಕೋ
ದಂಡ ರುದ್ರನ ಮುಂಕೊಂಡು ಭಜಿಸಿ ರಣ
ಮಂಡಲದೊಳು ಜಗಭಂಡನ ಕರುಳನು
ದಂಡೆಯ ಮುಡಿಸಿದ ಖಂಡ ಪ್ರತಾಪ 2
ದ್ವಿಜನ ಉದರದಲ್ಲಿ ಸೃಜಿಸಿ ಮೆರೆದೆಯೊ
ತ್ರಿಜಗದೊಳಗೆ ಶುದ್ಧ ಸುಜನಾಂಬುಧಿಗೆ ಚಂದ್ರ
ಕುಜನ ಮತ ಭುಜಂಗ ದ್ವಿಜರಾಜನೆನಿಸಿದೆ
ಅಜನ ಪಿತನ ಪಾದಾಂಬುಜವ ಬಿಡದೆ ನಿತ್ಯ-
ಭಜಿಸುವೆ ಯತಿ ದಿಗ್ವಿಜಯ ಮೂರುತಿ ಸುರ-
ಪಂಕಜ ಭವ ಪದವಿಯ
ನಿಜವಾಗಿ ಕೈಗೊಂಡು ಋಜುಗಣದಧಿಪ ತಿವಿಜಯವಿಠ್ಠಲನಂಘ್ರಿರಜವನು ಧರಿಸಿದ 3