ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಕೃಷ್ಣ ಕಂಡಿರೆ ಅದ್ಭುತ ಕೂಸ ಕಂಡಿರೆ ಕಂಡಿರೆ ಅದ್ಭುತ ಕೂಸ ನಾಭಿ- ಪ. ಮಂಡಲದೊಳಗಬ್ಜಕೋಶ ಅಹ ರಿಪು ಪುಂಡರೀಕ ಚಕ್ರ ಪಾಂಡವ ವನರುಹ ಚಂಡಗದಾದಂಡ ಮಂಡಿತ ಹಸ್ತನ ಅ.ಪ ಈರೇಳು ಭುವನದೊಳಿಲ್ಲದಂಥ ಚಾರು ಶೃಂಗಾರಗಳೆಲ್ಲ ಸಿರಿನಲ್ಲ ನಿನ ಗ್ಯಾರು ಸರ್ವೋತ್ತಮರಿಲ್ಲ ಅಹ ಕ್ರೂರ ಕಂಸಭಯಭೀರುಗಳಾಗಿಹ ಶೌರಿ ದೇವಕಿಯಯಿದಾರನೆಯ ಮಗುವನು 1 ಪಾದ ವೃತ್ತ ಜಂಘೋರು ಪರಿಗತವಾದ ಜಾನು ಶೃಂಗದಂತೆ ಪೂರ್ಣಮಾದ ಮಾ ತಂಗ ಹಸ್ತಸಮನಾದ ಅಹ ಪೀವರೋರು ಸಂಗಿ ಸರ್ವಲೋಕ ಮಂಗಲದಾಯಿ ಶುಭಾಂಗವಾಸನನ್ನು 2 ತ್ರಿಭುವನ ಕಮಲಾಧಾರ ನಾಳ ನೆಗೆದು ಬಂದಿರುವ ಗಂಭೀರ ನಾಭಿ ಸ್ವಗತ ಭೇದದಿಂದ ದೂರ ನಾನಾ ಬಗೆಯಾದ ಲೀಲಾವತಾರ ಅಹ ನಗುವ ರಮೆಯ ಸ್ತನಯುಗ ಮಧ್ಯದೊಳಗಿಟ್ಟ ಖಗಪತಿವಾಹನ ಮಗುವಾದ ಬಗೆಯನು 3 ಕಂಬುಸಮಾನ ಸುಗ್ರೀವ ಲಲಿ- ತಾಂಬುಜಮಾಲೆಯ ಭಾವ ವಿಧಿ- ಕೌಸ್ತುಭ ಶೋಭಾ ಕರು ಣಾಂಬುಧಿ ಭಕ್ತ ಸಂಜೀವಾ ಅಹ ಬಿಂಬಾಧರ ಕಮಲಾಂಬಕ ಮೃದುನಾಸ ನಂಬಿದ ಭಕ್ತ ಕುಟುಂಬಿಯಾಗಿರುವವನ 4 ಮಕರಕುಂಡಲ ಯುಗ್ಮಲೋಲ ದಿವ್ಯ ಕಪೋಲ ಭವ ಚಕಿತರ ಸಲಹುವ ಬಾಲ ಪೂರ್ಣ ಅಕಳಂಕ ತಾರೇಶ ಲೀಲಾ ದಿವ್ಯ ಮುಖ ಲಲಾಟ ರತ್ನ ನಿಕಲ ಕಿರೀಟ ಸೇ- ವಕರ ರಕ್ಷಿಪ ಪೂರ್ಣ ಶಿಖರೀಂದ್ರವಾಸನ5
--------------
ತುಪಾಕಿ ವೆಂಕಟರಮಣಾಚಾರ್ಯ