ಚಿತ್ತಜನಯ್ಯನ ಚಿಂತಿಸು ಮನವೇಹೊತ್ತು ಕಳೆಯದೆ ಸರ್ವೋತ್ತಮನ ನೆನೆ ಮನವೆ ಪ
ಕಾಲನ ದೂತರು ನೂಲು ಹಗ್ಗವ ತಂದುಕಾಲು ಕೈಗಳ ಕಟ್ಟಿ ಮ್ಯಾಲೆ ಕುಟ್ಟಿಕಾಲಪಾಶದೊಳಿಟ್ಟು ಶೂಲದಿಂದಿರಿವಾಗಪಾಲಿಸುವರುಂಟೆ ಜಾಲವ ಮಾಡದೆ 1
ದಂಡಧರನ ಭಟರು ಚಂಡಕೋಪದಿ ಬಂದುಕೆಂಡದ ನದಿಯ ತಡಿಗೆ ಕೊಂಡೊಯ್ದುಖಂಡಖಂಡವ ಕಿತ್ತು ಕೆಂಡದೊಳಿಡುವಾಗಹೆಂಡಿರು ಮಕ್ಕಳು ಬಂದು ಬಿಡಿಸಬಲ್ಲರೆ ಮರುಳೆ 2
ಅಂಗಳಿಗೆ ದಬ್ಬಣಂಗಳ ಸೇರಿಸಿ ಎರಡುಕಂಗಳಿಗೆ ಸೀಸವ ಕಾಸಿ ಪೊಯ್ಯಲುತಂಗಿ ಅಕ್ಕ ಬಂದು ಭಂಗವ ಬಿಡಿಸುವರೆಅಂಗವು ಸ್ಥಿರವಲ್ಲ ರಂಗವಿಠಲ ಬಲ್ಲ 3