ಸರ್ವಮಂಗಳಸಾರ ಜಯ ಜಯ
ಭವ್ಯ ಸಚ್ಚಿದಾನಂದ ಜಯ ಜಯ ಶ್ರೀರಾಮ 1
ಬೋಧನೈಕ ಸುಖ ಜಯ ಜಯ
ವಾದ ದೂರವರ ಜಯ ಜಯ ಶ್ರೀರಾಮ 2
ನಿತ್ಯ ನಿರಂಜನ ಜಯ ಜಯ
ತತ್ತ್ವ ತಾರಕ ಮಂತ್ರ ಜಯ ಜಯ ಶ್ರೀರಾಮ 3
ವಿಶ್ವರೂಪ ಜಯ ಜಯ
ವಾಸುದೇವ ಜಯ ಜಯ ಶ್ರೀರಾಮ 4
ಚಂಡಕೋದಂಡಧರ ಜಯ ಜಯ
ಚಂಡಕಿರಣ ಕುಲತಿಲಕ ಜಯ ಜಯ ಶ್ರೀರಾಮ 5
ಮುಕ್ತಿದಾಯಕ ರಾಮ ಜಯ ಜಯ
ಪಾಲನ ಲೋಲ ಜಯ ಜಯ ಶ್ರೀರಾಮ 6
ಕಾಮಿತ ಫಲದಾತ ಜಯ ಜಯ
ಸೋಮವಂಶಜ ದೇವ ಜಯ ಜಯ ಶ್ರೀರಾಮ 7
ಕೂರ್ಮ ವರಾಹ ಮತ್ರ್ಯಸಿಂಹ ವಾಮನ ಜಯ ಜಯ
ಶಕ್ತ ಭಾರ್ಗವ ಕಲ್ಕಿ ಜಯ ಜಯ ಶ್ರೀರಾಮ 8
ಮೌನಿಮಂಡಲ ಮಧ್ಯಗ ಜಯ ಜಯ
ಧೇನುಪುರಾವನಶೀಲ ಜಯ ಜಯ ಶ್ರೀರಾಮ 9