ನೀರೆ ತೋರೆಲೆ ಜಗಪಾಲ ಮುಕುಂದನಾ|
ಶೂಲಧರನ ಮಿತ್ರನಾ ಪ
ಪಾಂಡವರಕ್ಷಕನಾ|ಪುಂಡಲೀಕಾಕ್ಷನಾ|
ಚಂಡಕೋಟಿ ಪ್ರಕಾಶನಾ||
ಕುಂಡಲ ವಿಭೂಷಿತ ಗಂಡಸತ್ಕಪೋಲನಾ|
ಪುಂಡಲೀಕಗತಿವರದನ ನಂದಕಿಶೋರನ1
ಪರಮ ವರಪುರಾಣ ಪುರುಷೋತ್ತಮನಾ|
ಕಂಸಾಸುರ ಮರ್ದನ ಗೋಪಾಲನಾ||
ಉರಗಾರಿ ಗಮನನಾ ನಿರುಪಮ ಚರಿತನಾ|
ವಾಸುದೇವ ಮುಕುಂದನಾ2
ಸನಕ ಸನಂದನಮುನಿ ಮಾನಸ ಹಂಸನಾ|
ಅನುಪಮ್ಯನಂತ ಮಹಿಮಾ||
ವನರುಹ ಯೋನಿವಂದ್ಯನ ಮಧು ಸೂಧನ|
ಘನಗುರು ಮಹಿಪತಿ ಸುತಪ್ರಭು ಶ್ರೀ ಕೃಷ್ಣನಾ3