ಕಾಯ ಬಲು ಹೇಯವೊ |
ಸಾಕು ಸಾಕು ಸಂಸಾರ ನೆಚ್ಚದಿರು ಎಚ್ಚರಿಕೆ ಪ
ಊಧ್ರ್ವಾಧೋ ಭಾಗದಿಂದ ಕೂಡಿದಾ ರಕ್ತಶುಕ್ಲ |
ಅರ್ಧರ್ಧ ಪ್ರವೇಸಿಯಾಗಿ |
ವರ್ಧನಾಗಿ ಮಾಂಸ ಪಿಂಡಿಕೆಯಲಿ ಬೆಳೆದು |
ಅರ್ಧವದೊಳಗೆ ಬಳುಲುವುದೇನೊ ಮಹಾ ಕಠೀಣಾ 1
ಸನ್ನಿರೋಧವಾದ ಪ್ರಾದೇಶದಲಿ ನೀನು |
ಬನ್ನ ಬಡುವದು ಜನಕೆ ಅರಿಯನಲ್ಲಾ |
ಮುನ್ನೆ ಇಂದ್ರನಿಗಾಗಿ ವರವಿತ್ತ ಸಂಪತ್ತು |
ಇನ್ನು ನಿನ್ನ ಸುತ್ತ ಬಂದದೆ ತಿಳಿದುಕೋ 2
ವಾತ ಶೈತ್ಯಜ್ವರ ಕೆಮ್ಮು |
ಸಪುತ ಧಾತುಗಳಿಂದ ಬರುವ ರೋಗ |
ಕ್ಲೇಶ ಮೋಹಗಳೊಡನೆ |
ಮಾಯಾ 3
ಕಾಮ ಮದ ಗರ್ವದಲಿ ಪುಂಜನಾಗಿ ದುರಳ ನಿ |
ಜ ಮಗಳ ಕೂಡ ಬೆರದಾಡಿ ಬೆರೆದು |
ರೋಮರೋಮ ವಿಷಯ ಪೂರ್ತಿಯಾಗಿ ಚರಿಸಿ |
ಪಾಮರನಾಗಿ ಬಳಲದಿರು ಬಹು ಜೋಕೆ 4
ಸತಿ ಸುತರು ಮಿಕ್ಕಾದ ಬಂಧುಗಳು ನೆರೆನೆರೆದು |
ಪ್ರತಿದಿವಸದಲಿ ಅಟ್ಟುವುದು ನೋಡು|
ಮತಿ ಚಂಚಲವಾಗಿ ಸತ್ಕರ್ಮ ವೃತ್ತಿಗೆ |
ಪ್ರತಿಕೂಲವಾಗುವದು ಪ್ರೀತಿಯಾಗದು ಮುಂದೆ 5
ಎಂತು ನೋಡಲು ವಿಷಯ ಅನುಭವಿಸಿದರು ಅದರ |
ಅಂತು ಕಂಡವರಾರು ವಲ್ಲೆನೆಂದು |
ಭ್ರಾಂತಿಯಿಂದಲಿ ತಿರುಗಿ ಬಯಲಾಗೋದಲ್ಲದೆ |
ಚಿಂತೆ ಇಷ್ಟಷ್ಟು ಏನೆಂದು ಪೇಳಲಿ 6
ಯಲೋ ಮನವೆ ಸಾರಿ ಪೇಳಿದೆನು ಚನ್ನಾಗಿ ನೀ |
ನೆಲೆ ಮಾಡಿಕೋ ಜ್ಞಾನ ಭಕುತಿ ವಿತ್ತಾ |
ಸುಲಭ ದೇವರ ದೇವ ವಿಜಯವಿಠ್ಠಲರೇಯ |
ಕೆಲಕಾಲ ನೆನೆದು ಸುಖಿಯಾಗು ಸುಜನರಾ ಕೇಳು 7