ಇನ್ನಾದರೂ ಮನದ ಚಂಚಲವ ನಿಲ್ಲಿಸೋ ನೆನ್ನೆ ಕಳೆಯಿತು ನಾಳೆ ಇನ್ನೇನು ಗತಿಯೋ ಪ ಗುರುಹಿರಿಯರನು ಕಂಡು ಶಿರಬಾಗಿ ವಂದಿಸಲು ಚಿರಬಾಳು ನೂರ್ವರ್ಷ ಎಂದೆಂಬರು ಧರೆಯಿಂದ ಜವನವರು ಕರೆಯ ಬರುವಾದಿನವೆ ಬರಿದಾಗುವುದು ನೂರು ವರ್ಷವದರಿಂದ 1 ಧನಕನಕ ಮನೆ ಮಾಟ ಎನಗೆ ಚಿರವೆಂದೆನುತ ಮನವಿಂದ್ರಿಯಂಗಳನು ನಡಸಿತೆಲ್ಲೆಡೆಗೆ ತನಗಾಗಿಯೇ ಸಕಲ ಜನರು ಜನಿಸಿದರೆಂದು ನೆನೆದು ಹಿಂಸಿಸಿತವರ ಓ ಮಾಂಗಿರೀಶ 2