ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಮೆಚ್ಚಿದೆ ಎಲೆ ಹೆಣ್ಣೆ-ಏನು ಮರುಳಾದೆಯೆ |ಏನು ಮೆಚ್ಚಿದೆಯೆಲೆ ಹೆಣ್ಣೆ ಪನೋಟದಿ ಚೆಲುವನೆಂಬೆನೆ ಚಂಚಲರೂಪ|ಮಾಟದಿ ಚೆಲುವನೆ ಬೆನ್ನಲಿ ಬುಗುಟಿ ||ಗೂಟದಂತೆ ಹಲ್ಲು ಮೊಳದುದ್ದ ಮೋರೆಯು |ಬೂಟಕತನದಲ್ಲಿ ಬಾಯ ತೆರೆವನಿಗೆ 1ಅಣುರೂಪದವನಿವ ನಿಲುವು ಉಳ್ಳವನಲ್ಲ |ಬನವ ತವರಿವವನಂತೆ ಕೈಯಲಿ ಕೊಡಲಿ ||ಅನುಜರ ಬಿಟ್ಟು ಕಪಿಗಳ ಕೂಡಿ ಆಡುವ |ಮನೆಮನೆಗಳ ಪೊಕ್ಕು ಕದ್ದು ತಿಂಬವನಿಗೆ 2ಗಂಭೀರ ಪುರುಷನೆಂಬೆನೆ ದಿಗಂಬರನಿವ |ಅಂಬರದಲಿ ಕುದುರೆ ಕುಣಿಸುವನು ||ಅಂಬುಜಾಕ್ಷನಮ್ಮ ಪುರಂದರವಿಠಲಗೆ |ಸಂಭ್ರಮದಿಂದಲಿ ಮರುಳಾದೆ ಹೆಣ್ಣೆ 3
--------------
ಪುರಂದರದಾಸರು