ಎಲ್ಲಿ ನೋಡಿದರು ಹಾನಂತೆ ಹರಿ
ಎಲ್ಲ ಜಗವ ತುಂಬಿಹನಂತೆ ಪ
ಮಣ್ಣುಮುಳ್ಳು ಎಲ್ಲ ಬಿಡದೆ
ಸೋಸಿಲಿನೋಡಲಲ್ಹಾನಂತೆ ಅ.ಪ
ಸಾಗರ ನಿಲಯ ತಾನಂತೆ
ಕೂಗಲು ಕಂಬಂದಿ ಬಂದನಂತೆ
ನಾಗಶಾಯಿದ್ದ್ವೊಯ್ಕುಂಠಂತೆ
ಬೇಗನೆ ಸರಸಿಯಲ್ಲಿದ್ದನಂತೆ
ನೀಗಿ ಚಂಚಲಮನ ಬಾಗಿ ವಿಚಾರಿಸಲು
ಯೋಗಿ ವಂದ್ಯ ಎಲ್ಲಿಲ್ಲಂತೇ 1
ದ್ವಾರಕಾಪುರದಲ್ಲಿ ಮನೆಯಂತ
ಕ್ರೂರನ ಸಭೆಗೊದಗಿದನಂತೆ
ಸಾರನಿಗಮಕಗೋಚರನಂತೆ
ಪೋರಗೆ ದೊರೆತ್ವವಿತ್ತನಂತೆ
ಸಾರಮನದ ವಿಕಾರವಳಿದು ತಿಳಿ ಅ
ಪಾರಮಹಿಮ ಯಾರೆಲ್ಲಂತೇ 2
ಘೋರರಕ್ಕಸ ಸಂಹರನಂತೆ
ಸೇರಿಭಕ್ತರ ಸಲಹುವನಂತೆ
ಮೂರು ಲೋಕಗಳ ದೊರೆಯಂತೆ
ಸಾರಥಿತನ ಮಾಡಿದನಂತೆ
ಮೂರುಲೋಕದ ಧಣಿ ಓರ್ವ
ಶ್ರೀರಾಮನೆ ಆರಾಧಿಪರಲ್ಲಿ ಹಾನಂತೆ 3