ತೊಂಡನು ಕಂಡುದ ಬಿನ್ನೈಸುವೆನುಪಾಂಡವ ಪ್ರಿಯ ಎನ್ನ ತಪ್ಪು ಕಾಯಯ್ಯ ಪ
ಹರಿ ನಿನ್ನ ನಾಮ ಕಾಮಧೇನುವಿಗೆದುರಿತದೊಟ್ಟಿಲು ಮೇವು ಭವಾಂಬುಧಿಯುಅರಸಿ ಕುಡಿವ ನೀರೆರೆವಡೆನ್ನಲ್ಲಿಭರಿತವಾಗಿರೆ ಒಲಿದು ಎನ್ನೊಳ್ಯಾಕಿರಿಸೆ 1
ಮುನಿಗಳ ಮನದ ಮೊನೆಯಾದ ಕೊನೆಯಲ್ಲಿಘನಭಕ್ತಿ ಪಾಶದಿ ಸಿಲುಕಲ್ಯಾಕೆಎನ್ನ ಚಿತ್ತ ಚಂಚಲದುಯ್ಯಾಲೆಯಲಿನಿನ್ನ ಮನಬಂದಂತೆ ಓಲ್ಯಾಡಲಾಗದೆ 2
ಕರ್ಣರಂಧ್ರದಿ ಮನವನು ಪೊಕ್ಕು ಪಾಪವನಿನ್ನವರಲಿ ತಳವರಸಲ್ಯಾಕೆಎನ್ನೊಳ ಹೊರಗೆ ಪಾಪರಾಸಿಗಳಿವೆನಿನ್ನ ಮನಬಂದಂತೆ ಸೊರೆಗೊಳ್ಳೆಲೊ ಕೃಷ್ಣ3