ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಡಂಗುರ ಹೊಡಿಸಿದ ಯಮನು | ಪಾಪಿ ಹೆಂಗೆಳೆಯವರ ತಂದು ಭಂಗಪಡೆಸಿದರೆಂದು ಪ ಮೃತಿಕೆ ಶೌಚÀದ ಗಂಧ ಪೋಗುವಂತೆ | ನಿತ್ಯದಲ್ಲಿ ಸ್ನಾನ ಮಾಡದೆ ಸುಮ್ಮನೆ || ತೊತ್ತು ಒಡತಿಯಾಗಿ ಮುಖವ ತೊಳಿಯದಿಪ್ಪ | ಕತ್ತೆ ಹೆಂಗಸರನು ಕಡಿದು ಕೊಲ್ಲಿರೊ ಎಂದು 1 ಪತಿಗೆರಗದೆ ಗೃಹಕೃತ್ಯ ಮಾಡುವಳ | ಮತಿವಿರದೆ ಚಂಚಲದಿಪ್ಪಳ || ವ್ರತಗೇಡಿ ಅನ್ಯರ ಮಾತಿಗೆ ಸೋಲುವ | ಪತಿತಳ ಎಳೆತಂದು ಹತವ ಮಾಡಿರೆಂದು 2 ಒಬ್ಬರಿಬ್ಬರ ಕೂಡ ಸಖತನ ಮಾಡುವಳ | ಒಬ್ಬೊಬ್ಬರಿಗೆ ಮೈಯಿತ್ತು ಪಾಡುವಳೆ || ಅಬ್ಬರದ ಸೊಲ್ಲನು ವಿಸ್ತರಿಸುವಳ | ದಬ್ಬಿರೊ ವೃಶ್ಚಿಕದ ಕುಂಡದೊಳಗೆ ಎಂದು 3 ವಸನವಿಲ್ಲದೆ ಮೈಯ ತೊಳಕೊಂಬೊ ಪಾಪಿಯ | ಅಶನ ಭಕ್ಷಿಸುವಾಗ ಅಳಲುವ ದುಃಖಿಯ ಪೆಸರಿಯ ತರೆ ಕೆಳಗಾಗಿ ಬಾಧಿಸರೆಂದು 4 ಬಿಗಿದು ಪುಟವ ಹಾಕಿ ಬದಿ ಬಗಲ ಮುಚ್ಚದೆ | ನಗುವಳು ಅವರಿವರೆಂದರಿಯದೆ || ಬಗೆ ಬಗೆ ವಯ್ಯಾರ ನಿಜವಾಗಿ ತೋರುವ | ಅಧಮ ನಾರಿಯೆ ತಂದು ಅರಿದು ಕೊಲ್ಲಿರೊ ಎಂದು 5 ಪಾಕದ ಪದಾರ್ಥ ನೋಡಿ ಇಡದವಳ | ಲೋಕವಾರ್ತೆಗೆ ಮನೆಯ ಜರಿದು ಪತಿಗೆ || ಬೇಕಾದವರ ಜರಿದು ಬಹುಪುಷ್ಪ ಮುಡಿದಿಪ್ಪ ಕಾಕಿಯ ಎಳೆತಂದು ಕಣ್ಣು ಕಳಿಚಿರೆಂದು 6 ಪಂಕ್ತಿ ಭೇದವ ಮಾಡಿ ಬಡಿಸುವ ಪಾಪಿಯ | ಕಾಂತ ಕರೆದಾಗ ಪೋಗದವಳ || ಸಂತರ ನೋಡಿ ಸೈರಿಸದಿಪ್ಪ ನಾರಿಯ | ದಂತಿಯ ಕೆಳಗೆ ಹಾಕಿ ತುಳಿಸಿ ಕೊಲ್ಲಿರೊ ಎಂದು 7 ವಿಧವೆಯ ಸಂಗಡ ಇರಳು ಹಗಲು ಇದ್ದು | ಕದನ ತೆರೆದು ನೆರಳು ನೋಡುವಳ || ಕದದ ಮುಂದೆ ಕುಳಿತು ತಲೆ ಬಾಚಿ ಕೊಂಬುವಳ | ಕುದಿಸಿ ಕಟಾಹದೊಳು ಮೆಟ್ಟಿ ಸೀಳಿರೊ ಎಂದು 8 ಆವದಾದರು ತೊರೆದು ಪತಿದೈವವೆಂದರಿದು | ಸೇವೆಯ ಮಾಡಿ ಸುಜನರಿಗೆ ಬೇಗ || ದೇವೇಶ ವಿಜಯವಿಠ್ಠಲ ತಿರುವೆಂಗಳ | ಕೈವಲ್ಯ ಕಲ್ಪಿಸಿ 9
--------------
ವಿಜಯದಾಸ