ನಿನ್ನವಳ ಬಗೆಯ ಪೇಳುವೆನು ಕೇಳೋಮನ್ನಿಸೋ ಮಾನಿನೀಮಣಿಯನು ಕೃಪಾಳೋ ಪ
ಕನ್ನಡಿಯ ನೋಡಿದಳೋ ಕರುಳ ನೇವರಿಸಿದಳೋಚಿನ್ನದುಂಗುರವ ಬೆರಳೊಳಗಿಟ್ಟಳೋಕಣ್ಣಕಪ್ಪಿಟ್ಟು ತಿಲಕವ ತಿದ್ದಿಕೊಂಡಳೋರನ್ನದೊಡವುಗಳ ಸಖಿಯರಿಗೆ ಕರದಿತ್ತಳೋ 1
ಜಾತಿಮುತ್ತಿನ ಸರವ ಹಾಕಿಕೊಂಡಳೋ ಕೊರಳ್ಗೆಜಾತಿಮಲ್ಲಿಗೆಯ ಮಾಲೆಯ ಮುಡಿದಳೋಪ್ರೀತಿಯಿಂ ಸಾಕಿದ ಗಿಣಿಯ ತರಿಸಿ ನೋಡಿದಳೋನೂತನದ ಚಂಗಾವಿ ಸೀರೆಯನೆ ನೆರಿದುಟ್ಟಳೋ 2
ಚಿತ್ತಾರದ ಪಟದಲ್ಲಿ ನಿನ್ನ ರೂಪನೆ ಬರೆದುಅರ್ತಿಯಿಂ ಕೈಮುಗಿದು ನೋಡುತಿಹಳೋಹೊತ್ತುಗಳೆವುದಕೆ ಹರಣಲ್ಲಿ ಬಂದುನೆರದುಳುಹೊಚಿತ್ತಜನಮದಭಂಗ ಕೆಳದಿ ರಾಮೇಶಲಿಂಗ 3