(3) ಶ್ರೀಕೃಷ್ಣ ಲಾಲಿ
ಜೋ ಜೋ ಶ್ರೀಕೃಷ್ಣ ಗೋಪಾಲಕನೆ
ಜೋ ಜೋ ಗೋಪಿಯ ಕುಮಾರನೆ ಪ
ಪಾಡಿತೂಗುವೆನಯ್ಯ ಜೋಜೋಜೋ ಅ.ಪ
ಹಾಲಿನ ಹೊಳೆಯಲಿ ಹರಿದು ಬಂದವನೆ
ಆಲದೆಲೆಯ ಮೇಲೆ ಮಲಗಿ ಬಂದವನೆ
ಕಾಲಿನ ಹೆಬ್ಬೆರಳ ಬಾಯಲಿಟ್ಟವನೆ
ಹಾಲುಗಲ್ಲದ ಶಿಶುವೆನಿಸಿಕೊಂಡವನೆ
ಪಾಡಿತೂಗುವೆನಯ್ಯ ಜೋಜೋಜೋ 1
ಕೆತ್ತಿದ ಚಿನ್ನದ ತೊಟ್ಟಿಲು ಇಲ್ಲ
ಮುತ್ತಿನ ಮಣಿಗಳ ಸರಗಳು ಇಲ್ಲ
ಮೆತ್ತನೆ ಹಾಸಿದ ಬಟ್ಟೆಯ ಮೇಲೆ
ಹೊತ್ತು ಮೀರಿದೆ ಮಲಗೋ ಕಂದ
ಪಾಡಿತೂಗುವೆನಯ್ಯ ಜೋಜೋಜೋ 2
ಚೆನ್ನಯ್ಯ ನೀನು ಮುದ್ದರಂಗಯ್ಯ
ಅಣ್ಣಯ್ಯ ಕಾಣೋ ತುಂಟ ಕೃಷ್ಣಯ್ಯ
ಸುಮ್ಮನೆ ಮಲಗಯ್ಯ ರಂಪಾಟ ಮಾಡದೆ
ಕಣ್ಮುಚ್ಚಿ ಪವಡಿಸೋ ಪರಮಾನಂದನೆ
ಪಾಡಿತೂಗುವೆನಯ್ಯ ಜೋಜೋಜೋ 3
ಅಂಗೈಯಲ್ಲೆ ಅದ್ಭುತ ಮಾಡುವೆ
ಅಂಗಾಂಗದಲ್ಲಿ ಬ್ರಹ್ಮಾಂಡ ತೋರುವೆ
ಭಂಗ ಪಾಂಡುರಂಗ
ಚಂಗನೇಳದೆ ಮಲಗೊ ಜಾಜಿಪುರಿರಂಗ
ಪಾಡಿತೂಗುವೆನಯ್ಯ ಜೋಜೋಜೋ 4