ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅನಂತ ಅಪರಾಧ ಅನುಗಾಲ ಮಾಡುತಿಹೆ ಪ ಸ್ನಾನ ಸಂದ್ಯಾ ಜಪ ಮೌನವೇ ಮೊದಲಾದ ನಾನಾವಿಧದ ವಿಹಿತ ಧರ್ಮತೊರೆದು ನಾನು ನನ್ನದು ಎಂಬೊ ಹೀನ ಬುದ್ಧಿಗಳಿಂದ ಹೀನ ಜನರೊಡಗೂಡಿ ಙÁ್ಞನಿಗಳ ನಿಂದಿಸುವೆ 1 ಶ್ರೀಕಾಂತ ನಿನ್ನ ಸೇವೆಯನು ಮರೆದು ಬೇಕಾದ ವೈಷಿಕವ ಸ್ವೀಕರಿಸಿ ಲೋಕÀದೊಳು ಸಾಕಿದವರನು ನಾ ನಿರಾಕರಿಸಿ ಬಾಳುವೆನು 2 ಎನಗಿಂತ ಅಧಿಕರಾದವರ ಕೂಡ ದ್ವೇಷವನು ಅನುಗಾಲ ಮಾಡುವೆನೊ ಅನಿಮಿಷೇಶಾ ಎನಗೆ ಸರಿಯಾದವರ ಕಂಡು ಮತ್ಸರಿಸುವೆನು ಎನಗಿಂತ ನೀಚರನು ನಾ ನೋಡಿ ನಗುತಿಪ್ಪೆ 3 ಕಾಸಿನಾಸೆಗೆ ಪೋಗಿ ದಾಸವೇಷವÀ ಧರಿಸಿ ಮೋಸಮಾಡುವೆ ಜನರ ಪಾಶದಿಂದಾ ವಾಸುದೇವನೆ ಸರ್ವದೇಶ ಕಾಲಾದಿಗಳಿ ಗೀಶನೆಂದರಿಯದಲೆ ಮೋಸಹೋದೆನು ಸ್ವಾಮಿ 4 ಸಕಲ ದುರ್ಗುಣಕೆ ಆಗಾರ ನಾನವನಿಯೊಳು ಭಕುತಿ ವೈರಾಗ್ಯ ಪ್ರಸಕುತಿಯಿಲ್ಲಾ ಭಕುತವತ್ಸಲ ಗುರುಜಗನ್ನಾಥವಿಠಲನೆ ಅಕಳಂಕಮಹಿಮನೆ ಮುಕುತಾಮುಕುತರೊಡೆಯಾ 5
--------------
ಗುರುಜಗನ್ನಾಥದಾಸರು
ಈತ ಶ್ರೀಗುರು ಪರಬ್ರಹ್ಮನೆನ್ನಿ ಅತೀತವಾದ ಗುಣತ್ರಯ ಪರಮಾತ್ಮನೆನ್ನಿ ಧ್ರುವ ನಿರ್ಗುಣಾಂದನೆನ್ನಿ ನಿಗಮಗೋಚರನೆನ್ನಿ ಅಗಣಿತಗುಣ ಪರಿಪೂರ್ಣನೆನ್ನಿ 1 ಯೋಗಾನಂದಾತ್ಮನೆನ್ನಿ ಯೋಗಿವಂದಿತನೆನ್ನಿ ಯೋಗಿಹೃದಯವಾಸ ಯೋಗನಿಧಾನನೆನ್ನಿ 2 ಸಾಧುಸಹಕಾರನೆನ್ನಿ ಸದಾನಂದಾತ್ಮನೆನ್ನಿ ಸದ್ಬ್ರಹ್ಮಾನಂದ ಸದೋದಿತನೆನ್ನಿ 3 ಙÁ್ಞನಸಾಗರನೆನ್ನಿ ಙÁ್ಞನಾನಂದಾತ್ಮನೆನ್ನಿ ಙÁ್ಞನಿಗಳೊಂದಿಹ ಸುಙÁ್ಞನಸ್ವರೂಪನೆನ್ನಿ 4 ಪರಮಪುರಷನೆನ್ನಿ ಪರಮಪ್ರಕಾಶನೆನ್ನಿ ಪರಮಾನಂದಸ್ವರೂಪ ಪರಾತ್ಪರ ಪೂರ್ಣನೆನ್ನಿ 5 ಇಹಪರನೀತನೆನ್ನಿ ಗುಹ್ಯಗುಪಿತನೆನ್ನಿ ಬಾಹ್ಯಾಂತ್ರಪರಿಪೂರ್ಣ ತ್ರೈಲೋಕ್ಯನಾಥನೆನ್ನಿ 6 ಕಾವಕರುಣನೆನ್ನಿ ಭವಭಂಜನನೆನ್ನಿ ಜೀವಸಂಜೀವ ಮಹಿಪತಿ ಗುರುಮೂರ್ತಿಯೆನ್ನಿ 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಎಲ್ಲಿಗ್ಹೋಗಿ ತಡಮಾಡಿದ್ಯೋ ಫುಲ್ಲಲೋಚನ ಕೃಷ್ಣ ನೀ ಎಲ್ಲಡಗಿದ್ಯೊ ಧ್ರುವ ಬಲ್ಲವರಿಗೆ ಬಲ್ಲತನದೋರ ಹೋಗಿದ್ಯೊ ಅಲ್ಲಿ ಅವರ ಸಹಕಾರ ನೀನಾದ್ಯೊ ಸುಲ್ಲಭವಾಗಿ ಜ್ಞಾನಕೆ ನೀ ಸಿಲುಕಿದ್ಯೋ ಒಲ್ಲದ್ಹಾಂಗ್ಹೋಗಿ ಎಲ್ಲರಿಗಾಗಿದ್ಯೊ 1 ಙÁ್ಞನಿಗಳಿಗೆ ಙÁ್ಞನಸಮುದ್ರ ನಾಗಿದ್ಯೊ ಧ್ಯಾನಮಾಡುವರ ಧ್ಯಾನವೆ ಅಗಿದ್ಯೊ ಮುನಿಜನರೊಡನೆ ಮಾನಸ ಹಂಸನಾಗಿದ್ಯೊ ಖೂನದೋರಲು ಹೋಗಿ ನೀನೆ ಆಗಿದ್ಯೊ 2 ಧೃಢಭಕ್ತರೊಡನೆ ಭಿಡಿಯೊಳಗಾಗಿದ್ಯೊ ಕಡಿಗಾಗದ್ಹಾಂಗ ಕೈಯೊಳಗಾಗಿದ್ಯೊ ಎಡಬಲಕವರೆಂದು ಬಿಡದ್ಹಾಂಗಾಗಿದ್ಯೊ ಒಡಲ ಹೊಕ್ಕವರ ಒಡಿಯನಾಗಿದ್ಯೊ 3 ಪ್ರೇಮ ಉಳ್ಳವರ ಪ್ರೀತಿಯೊಳಗಾಗಿದ್ಯೊ ಸ್ವಾಮಿತನದಲಿ ಸಮೀಪನಾಗಿದ್ಯೊ ಕಾಮ ಪೂರಿಸಲಿಕೆ ನೇಮವ ಪಿಡಿದ್ಯೊ ಮಾಮನೋಹರ ನೀ ಸುಗಮವಾಗಿದ್ಯೊ 4 ಇಂದು ನೆನಪಾಯಿತೆಂದು ಓಡಿ ನೀ ಬಂದ್ಯೊ ಚಂಚವಾಗೆನ್ನೊಳಗಾದ್ಯೊ ನೀ ಬಂದ್ಯೊ ಕಂದಮಹಿಪತಿಗನುಭವದೋರ ನೀ ಬಂದ್ಯೊ ತಂದೆ ಸದ್ಗುರು ಅನಂದವ ತಂದ್ಯೊ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದಾತ ಅವಗುಣ ಧೂತ ಅವಗುಣ ಧೂತ ದೇವಾಧಿದೇವ ಶ್ರೀದೇವ ಅವಧೂತ ಧ್ರುವ ಜೀವದ ಜೀವ ದೇವರ ದೇವ ವಾಸುದೇವ 1 ಪ್ರಾಣಕ ಪ್ರಿಯ ಮುನಿಜನಾಶ್ರಯ ಙÁ್ಞನಿಗಳಿಗೆ ಸಾಹ್ಯ ಅನುಕೂಲ ನಮ್ಮಯ್ಯ 2 ಅನಾಥ ಬಂಧು ಘನಕೃಪಾಸಿಂಧು ಅನುದಿನ ದೊರೆವ ದೀನನಾಥನೆಂದೆಂದು 3 ಮನದ ಮಾಣಿಕ ಅಣುರೇಣುಕ ವ್ಯಾಪಕ ಅನಂತಕೋಟಿ ಬ್ರಹ್ಮಾಂಡ ನಾಯಕ 4 ಪರಮ ಉದಾರ ಕರುಣಾಸಾಗರ ತರಳ ಮಹಿಪತಿಸ್ವಾಮಿ ಇಹಪರ ಸಹಕಾರ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಶ್ರೀಗುರುವೆ ತಾಯಿ ತಂದೆನಗ ನೀನು ಧ್ರುವ ತಾಯಿ ತಂದೆನಗ ನೀ ಬಾಹ್ಯಾಂತ್ರ ಪರಿಪೂರ್ಣ ಸಾಯೋಜ್ಯ ಸದ್ಗುರುನಾಥ ನೀನೆ ಸಂಜೀವ ಸಾಕ್ಷಾತ ನೀನೆ ಕಾವ ಕರುಣಾಳು ವರದಾತ ನೀನೆ ಇಹಪರದೊಳು ಸಕಳಾರ್ಥ ನೀನೆ 1 ಕರುಣ ಆನಂದದಲಿ ಹೊರೆದು ಸಲಹುವ ಮೂರ್ತಿ ಪರಮ ಜೀವದ ಅತಿ ಮೈತ್ರ ನೀನೆ ಸರ್ವ ಙÁ್ಞನಿಗಳ ಕುಲಗೋತ್ರ ನೀನೆ ದ್ರವ್ಯ ಧನವನು ಸಂಚಿತಾರ್ಥ ನೀನೆ ಪೂರ್ವಪ್ರಾಚೀನ ಪುಣ್ಯಸೂತ್ರ ನೀನೆ 2 ಬಾಲಕನ ಮ್ಯಾಲೆ ದಯಮಾಡಿ ಪಾಲಿಸುತೀಹ್ಯ ಕುಲಕೋಟಿ ಬಂಧುಬಳಗ ನೀನೆ ಮೂಲಪುರಷನ ಋಷಿದೈವ ನೀನೆ ಪರಿ ಬಲವು ಇಳಯೊಳಗೆ ನೀನೆ ಸಲಹುತಿಹ ಮಹಿಪತಿಸ್ವಾಮಿ ನೀನೆ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು