ಏನೆಂದ್ಹೇಳಲಿ ಸ್ವಾನಂದ ಮಹಿಮೆಯು
ಏನೆಂದ್ಹೇಳಲಿ ಮಾ ಧ್ರುವ
ವೇದಲ್ಲ ವಾದಲ್ಲ ಭೇದಮಾಡುವದಲ್ಲ
ಸಾಧಕರಿಗೆ ತಾ ಸಿಲುಕುದುಮಾ
ಓದಲ್ಲ ಶೋಧಲ್ಲ ಗಾದಿಯ ಮಾತಲ್ಲ
ಭೇದಿಸಿದರೆ ತಾನು ತಿಳಿವದು ಮಾ 1
ಧ್ಯಾನಲ್ಲ ಮೋನಲ್ಲ ಸ್ನಾನ ಸಂಧ್ಯಾನಲ್ಲ
ಙÁ್ಞನಹೀನರಿಗಿದು ತಿಳಿಯದು ಮಾ
ನಾನಲ್ಲ ನೀನಲ್ಲ ನಾನುಡಿದ ಮಾತಲ್ಲ
ಅನುಭವ ಸಿದ್ಧನು ಬಲ್ಲನು ಮಾ 2
ಸೇವಲ್ಲ ಸೂತ್ರಲ್ಲ ಬಾಹ್ಯನೋಟಿಕೆ ಅಲ್ಲ
ಮಹಿಪತಿ ನಿನ್ನೊಳು ತಿಳಿವದು ಮಾ
ಕೌತುಕವನು ಕಂಡು ಮಹಾ ಗುರುಕೃಪೆಯಿಂದ
ಸಾಯೋಜ್ಯ ಸದ್ಗತಿ ಪಡೆವದು ಮಾ 3