ಙÁ್ಞನವಿಲ್ಲದೆ ಬಾಳೂದೊಂದು ಸಾಧನವೆ
ಗಾಣದೆತ್ತಿನಂತೆ ಕಾಣದಿಹ್ಯದೊಂದು ಗುಣವೆ ಧ್ರುವ
ತನ್ನ ನÀರಿಯಲಿಲ್ಲ ಬನ್ನವಳಿಯಲಿಲ್ಲ
ಕಣ್ಣದೆರೆದು ಖೂನಗಾಣಲಿಲ್ಲ
ಸಣ್ಣದೊಡ್ಡರೋಳೆನೆಂದು ತಿಳಿಯಲಿಲ್ಲ
ಬಣ್ಣ ಬಣ್ಣದ ಶ್ರಮ ಬಿಡುವದುಚಿತವಲ್ಲ 1
ಶಮದಮಗೊಳ್ಳಲಿಲ್ಲ ಕ್ಷಮೆಯು ಪಡೆಯಲಿಲ್ಲ
ಸಮದೃಷ್ಟಿಯಲಿ ಜನವರಿಯಲಿಲ್ಲ
ಸಮರಸವಾಗಿ ಸದ್ಛನವ ನೋಡಲಿಲ್ಲ
ಭ್ರಮೆ ಅಳಿದು ಸದ್ಗುರುಪಾದಕೆರಗಲಿಲ್ಲ2
ಗುರು ಕೃಪೆ ಇಲ್ಲದೆ ಗುರುತಾಗುವದಲ್ಲ
ಗುರುತಿಟ್ಟು ನೋಡಿಕೊಂಡವನೇ ಬಲ್ಲ
ಗುರು ಭಾನುಕೋಟಿ ತೇಜನಂಘ್ರಿ ಕಂಡವನೆಬಲ್ಲ
ತರಳ ಮಹಿಪತಿ ಸ್ವಾಮಿ ಸುಖ ಸೋರ್ಯಾಡುವದೆಲ್ಲ 3