(ಖ) ಶತಸ್ಥಮರುತುಗಳು
ಮರುತಗಳ ನಾಮವನು ಉದಯದಲಿಯೆದ್ದು |
ದುರಿತ ಪರಿಹಾರವಾಗುವುದು ಪ
ಪ್ರಾಣ ಅಪಾನನು ವ್ಯಾನ ಉದಾನ ಸ |
ಮಾನ ಮತ್ತೆ ನಾಗ ಕೈಕಲಕೂರ್ಮ ||
ಏನೆಂಬೆ ದೇವದತ್ತನು ಧನಂಜಯ ಪ್ರವಾ |
ಹನನು ವಿವಹ ಸಂಯಾ ಸಂವಾಹನೆಂದು 1
ಶೀಲ ಪರಾವಹ ಉದ್ವಹ ವಾಹಶಂಕು |
ಕಾಲ ಶ್ವಾಸ ಅನಳ ಅನಿಲಪ್ರತಿಯೂ ||
ಬಾಲ ಕುಮುದಾಕಾಂತ ಶುಚಿಶ್ವೇತ ಅಜಿತಗುರು |
ಮೇಲಾಗಿ ಸಂಸಾರ ಪ್ರವರ್ತಕ ಕಿಲರನ್ನ 2
ತರುವಾಯ ಅಜಿತ ಸಂಯನು ಕಪಿ ಜಡದೇವ |
ಮರಳೆ ಮಂಡುಕ ಸತತ ಸಿದ್ಧ ರಕ್ತಾ ||
ಸರಸ ಕೃಷ್ಣ ಪಿಕಶುಕ ಯತಿ ಭೀಮಹನು |
ಮರಿಯದಲೆ ಪಿಂಗ ಅಹಂಪ್ರಾಣ ಕಂಪನ 3
ಇವರ ಸಹಿತವಾಗಿ ಸೂತ್ರನಾಮಕ ಮೂಲ |
ಪವಮಾನನೊಡನೆ ಗಣಣೆಯನು ಮಾಡಿ ||
ತವಕದಿಂದಲಿ ತಾರತಮ್ಯವನೆ ತಿಳಿದು |
ನಿತ್ಯ 4
ಇವನೆ ಪಠಿಸಿದರೆ ಜನ್ಮ ಜನುಮದ ಪಾಪ |
ಉದರಿ ಪೋಗುವದು ಲೇಶ ಉಳಿಯದೆ ||
ಪಮಮನಾಭ ನಮ್ಮ ವಿಜಯವಿಠ್ಠಲರೇಯನ |
ಪದವ ಭಜಿಸುವದಕ್ಕೆ ಙÁ್ಞನವೇ ಪುಟ್ಟವದು 5