ಶ್ರೀಮೋದವಿಠಲದಾಸರ ಸ್ತೋತ್ರ
ಮೋದವಿಠಲದಾಸರಾಯ ನಿನ್ನ
ಪಾದವನಂಬಿದೆ ಪಾಲಿಪುದಯ್ಯ ಪ
ಭೇದಮತಾಬ್ಧಿ ಪಾಠಿನ ಆದು -
ರ್ವಾದಿಮಾಯಿಗಳಿಗೆ ಗಂಟಲಗಾಣ
ಸಾಧುಜನರ ಪಂಚಪ್ರಾಣನೆನಿಪ
ಮೇದಿನಿಯೊಳು ಹರಿಭಕ್ತ ಪ್ರವೀಣ 1
ಗುರುಪ್ರಾಣೇಶದಾಸರಲಿ ಜ್ಞಾನ
ವರ ಉಪದೇಶವ ಕೊಂಡು ಭಕ್ತಿಯಲಿ
ವರದೇಂದ್ರಾರ್ಯರ ಸನ್ನಿಧಿಯಲಿ ಸತತ
ಹರಿಭಜನೆಯ ಮಾಳ್ಪ ನಲಿನಲಿಯುತಲಿ 2
ಸ್ನಾನಸಂಧ್ಯಾದ್ಯನುಷ್ಠಾನವನು
ಙÁ್ಞನಪೂರ್ವಕದಿ ಚರಿಸುವ ನಿಧಾನ
ಹೀನಜನಗಳಲ್ಲಿ ಮೌನ ನಿರುತ
ಶ್ರೀನಿವಾಸನ ಮನದಲಿ ಮಾಳ್ಪ ಧ್ಯಾನ 3
ಬಾಲ್ಯತನದಿ ನಿಮ್ಮಾಜ್ಞ್ಞವನು ಮೀರಿ
ಕಾಲಕಳೆದೆ ದುರ್ವಿಷಯದಿ ನಾನು
ಶ್ರೀಲೋಲನಂಘ್ರಿ ಮರೆದೆನು ಮುಂದೆ
ಪಾಲಿಸೆನ್ನಯ ಮೊರೆ ಶರಣು ಬಂದಿಹೆನು 4
ಶ್ರೀ ಮರುನ್ಮತಙÁ್ಞನವನು ನಮ್ಮ
ಸ್ವಾಮಿ ವರದÉೀಶವಿಠಲನ ದಾಸ್ಯವನು
ಆ ಮುನಿವರನ ಸೇವೆಯನು ಕೊಟ್ಟು
ನೀ ಮುದದಲಿ ಕರುಣಿಸು ಸುರಧೇನು5