ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಲಕ್ಷ್ಮೀದೇವಿಯ ಸ್ತೋತ್ರ ಭಾಗ್ಯವೆ ಪಾಲಿಸೆನ್ನಗೆ ಭಾರ್ಗವಿ ಜನನಿ ಪ ಭಾಗ್ಯವೆ ಪಾಲಿಸು ಭಾರ್ಗವಿ, ಕಮಲಜ ಭಾರ್ಗಾದ್ಯನಿಮಿಷ ವರ್ಗಸೇವಿತೆ ಅ.ಪ ಹರಿಸರ್ವೋತ್ತಮ ಗುರುಸುಖತೀರ್ಥರು ಹರಫಣಿ ವಿಪಶಕ್ರಾದಿಗಳು ತರತಮ ಭೇದ ಮೂರೆರಡು ಸತ್ಯ ವೆಂ - ದರಿತು ಮನದಿ ಬಲು ಹರುಷ ಬಡುತಲಿಹ 1 ಕಾಮಕ್ರೋಧಗಳ ಗೆಲಿದು ಸತತನಿ - ಷ್ಕಾಮ ಭಕ್ತಿಯಲಿ ಮನವುಬ್ಬಿ ರಾಮ ರಾಮ ಎಂದ್ ಪ್ರೇಮದಿ ಪಾಡುತ ರೋಮಾಂಚಿತ ತನುವಿಲಿನರ್ತಿಪ ಸೌ 2 ದುರ್ಜನ ಸಂಗ ವಿವರ್ಜಿಸಿ ನಿರುತದಿ ಸಜ್ಜನಸಂಗಸುಖವ ಬಯಸಿ ಅರ್ಜುನಸಖನ ಪದಾಬ್ಜಧ್ಯಾನ ದೊಳು ಗರ್ಜಿಸುತಲಿ ನಿರ್ಲಜ್ಜನೆನಿಪ ಸೌ 3 ನಾನುನನ್ನದೆಂಬೊಹೀನ ಮತಿಯ ಕಳೆ - ದೆನು ಮಾಡುತಿಹಕರ್ಮಗಳ ಶ್ರೀನಿವಾಸನ ಪ್ರೇರಣೆ ಎಂದು ಸ - ದಾನುರಾಗದಲಿ ಅರ್ಪಿಸುತಿಹ ಸೌ 4 ಸೂಸುವ ಭಕ್ತಿ ವಿರಕ್ತಿ ಙÁ್ಞನಧನ ರಾಶಿಯ ಕೋಟ್ಟೀಭವಸುಖದ ಆಶೆಬಿಡಿಸಿ ವರದೇಶ ವಿಠಲನ ದಾಸರ ದಾಸರ ದಾಸ ನೆನಿಪ ಸೌ 5
--------------
ವರದೇಶವಿಠಲ