ಜಯ ಜಯವೆನ್ನಿ ಕೈಯ ಮುಗುಬನ್ನಿ
ದಯವುಳ್ಳ ಮಹಿಮಗಾರುತಿ ಮಾಡುವ ಬನ್ನಿ ಧ್ರುವ
ಮನವೆ ಬತ್ತಿ ತನುವಾರತಿ ಘನಕೆ ಮಾಡವ ಬನ್ನಿ
ನೆನವು ತುಪ್ಪ ಙÁ್ಞನದೀಪವನ್ನು ಬೆಳಗುವ ಬನ್ನಿ 1
ಭಾವಗುಟ್ಟು ಠಾವಿಲಿಟ್ಟು ದೈವ ನೋಡು ಬನ್ನಿ
ಮಾವಮಕರಗುಣ ಬಿಟ್ಟು ಸೇವೆಮಾಡು ಬನ್ನಿ 2
ಮಹಿಪತಿಸ್ವಾಮಿಗಿನ್ನು ಜಯಜಯವೆನ್ನಿ
ಬಾಹ್ಯಾಂತ್ರ ಬೆಳಗಿ ಪೂರ್ಣ ಧನ್ಯವಾಗು ಬನ್ನಿ 3