ಙÁ್ಞನಗುರು ಶುದ್ಧ ಮಡಿವಾಳ
ಮನ ಮೈಲಿ ತೊಳೆವ ನಿರ್ಮಳ ಧ್ರುವ
ದೃಢ ಮಾಡುವ ಬಂಡೆಗಲ್ಲು
ತೊಡೆವ ಸುಭೋಧ ಸಬಕಾರ ಮೇಲು
ಹಿಡಿದು ಹಿಂಡುವ ಮನ ಮೈಲು
ಕುಡುವ ವೈರಾಗ್ಯದ ಬಿಸಿಲು 1
ಉದ್ದಿ ಒರಸುವ ಸಬಕಾರ ಕೈಯ
ಎದ್ದಿ ವಿವೇಕ ಉದರ ನಿಶ್ಚಯ
ಶುದ್ಧದೋರಿಸಿ ಸಾಂಪ್ರದಾಯ
ಸಿದ್ಧ ಮಾಡುವ ಗುರು ನಮ್ಮೈಯ್ಯ 2
ಸೆಳೆದು ಒಗೆವ ವ್ಯಾಳೆವ್ಯಾಳಗಯ್ಯ
ತೊಳೆದು ಅಹಂಭಾವದ ಕಲೆಯ
ಕೊಳ್ಳದೆ ಒಗೆವಾ ತಾ ಕೂಲಿಯ
ಬಿಳಿದು ಮಾಡುವ ಮೂಳೆ ಕಳಿಯ 3
ಆಶಿ ಎಂಬುದ ಹಾಸಿ ಒಣಗಿಸಿ
ಹಸನಾಗಿ ಘಳಿಗೆ ಕೂಡಿಸಿ
ಭಾಸಿ ಕೊಡುವ ತಾ ಘಟ್ಟಿಸಿ
ಲೇಸು ಲೇಸಾಗಿ ಅನುಭವಿಸಿ 4
ಶುದ್ಧ ಮಾಡಿದ ಮನ ನಿಶ್ಚಯ
ಸಿದ್ಧ ಸಾಕ್ಷಾತ್ಕಾರ ನಮ್ಮಯ್ಯ
ಸದ್ಬೋಧಿಸಿದ ಙÁ್ಞನೋದಯಸದ್ಗೈಸಿದ ಮಹಿಪತಿಯ 5