ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಏನು ಸಾಧಿಸುವದೇನರಿದು ಙÁ್ಞನಗಮ್ಯ ಗುರುಮಾರ್ಗದೊರೆಯಲರಿಯದು ಧ್ರುವ ನೀತಿಶಾಸ್ತ್ರವನೋದಿ ಪಂಡಿತನಾಗಲಿಬಹುದು ಶ್ರುತಿ ಸ್ಮøತಿಗಳ ತಿಳಿದು ತರ್ಕಸ್ಯಾಡಲಿಬಹುದು ಅತಿ ಬಲ್ಲತನದಿ ಯತಿಯನಿಸಿಕೊಳ್ಳಲಿಬಹುದು ಕ್ಷಿತಿಯೊಳು ಮೆರೆಯಲಿಬಹುದು ಸುತತ್ವ ಜ್ಞಾನಖೂನ ದೊರೆಯಲರಿಯದು 1 ಗೃಹತ್ಯಾಗಮಾಡಿ ಸಂನ್ಯಾಸಿ ಅಗಲಿಬಹುದು ದೇಹ ದಂಡಿಸಿ ವನವಾಸಿಯಾಗಲಿಬಹುದು ಗುಹ್ಯಗೊಪೆಯಲಿ ಸೇರಿ ತಪಸಿಯೆನಿಸಲಿಬಹುದು ಬಾಹ್ಯನಿಷ್ಠೆಯದೋರಬಹುದು ಸೋಹ್ಯ ಸದ್ಗುರುಮಾರ್ಗ ದೊರೆಯಲರಿಯದು 2 ಹಲವು ಕುಟಿಲದ ವಿದ್ಯವನು ಸಾಧಿಸಲಿಬಹುದು ಜಲದೊಳಗೆ ಮುಳಗಿ ಮಂತ್ರವನು ಜಪಿಸಲಿಬಹುದು ಸೀಲಿ ಸಾಲ್ವಳಿಯ ಸುಶಕುನ ಪೇಳಲಿಬಹುದು ಮ್ಯಾಲೆ ಜನರಂಜಿಸಲಿಬಹುದು ಮೂಲ ಮುಕ್ತಿ ಕೀಲ ತಿಳಿಯಲರಿಯದು 3 ಪೃಥ್ವಿಯನೆ ತಿರುಗಿ ಬಹುಭಾಷೆಯಾಡಲಿಬಹುದು ಮತಿವಂತನಾಗಿ ಕವಿತ್ವಮಾಡಲಿಬಹುದು ಗೀತರಾಗವು ಜಂತ್ರದೊಳು ನುಡಿಸಲಿಬಹುದು ಚದುರಂಗ ಪಗಡ್ಯಾಡಿ ಗೆಲಬಹುದು ಮತ್ತ ಮನ ಬೆರೆವ ಘನಸುಖವು ದೊರೆಯಲರಿಯದು 4 ಶೂರತನದಲಿ ಪರಾಕ್ರಮ ಹಿಡಿಯಲಿಬಹುದು ಧೀರಗುಣದಲಿ ಮಹಾಧೀರನೆನಿಸಲಿಬಹುದು ನೂರ್ಬಲದ ಪೌರುಷಲಿ ರಾಜ್ಯನಾಳಲಿಬಹುದು ಸಿರಿಸೌಖ್ಯದೊಳಿರಲಿಬಹುದು ಸಾರ ಸುಜ್ಞಾನಸುಖ ದೊರೆಯಲರಿಯದು 5 ಪರ್ವತಾಗ್ರದಲೇರಿ ಧರೆಗೆರಗಲಿಬಹುದು ಹರಿವ ನದಿಯನೆ ಹಾರಿ ಹೋಗಲಿಬಹುದು ಮೊರೆವುತಿಹ್ಯ ಸರ್ಪದಾ ವಿಷವು ಧರಿಸಲಿಬಹುದು ಕ್ರೂರ ಮೃಗದೊಳು ತಿರುಗ್ಯಾಡಬಹುದು ಪಥ ದೊರೆಯಲರಿಯದು 6 ಪೊಡವಿಯೊಳು ಹವಲು ವಿದ್ಯವ ಸಾಧಿಸಲುಬಹುದು ಬಡದ ಬವಣಿಯ ಬಟ್ಟು ನಾಡ ಶೋಧಿಸಬಹುದು ಗೂಢ ವಿದ್ಯದ ಮಾತು ಆಡಿ ತೋರಿಸಬಹುದು ಹಿಡಿದು ಮೌನವ ಕೂಡಬಹುದು ಮೂಢಮಹಿಪತಿ ಒಡಿಯನ ಕೃಪೆ ಪಡೆವದೆ ದುರ್ಲಭವು 7
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಗುರ್ವಂತರ್ಗತ ಗೋಪಾಲ ಪಾಹಿ ಸರ್ವಪಾಲಕ ಶಿರಿಲೋಲ ಪ ಶರ್ವಸುರಗಂಧರ್ವ ಮುನಿಕುಲ Àಸರ್ವಸೇವಿತ ಗರ್ವರಹಿತನೆ ಅ.ಪ ರಾಮಾಕೃಷ್ಣ ವ್ಯಾಸರೂಪದಿಂದಾ ಮಾಮನೋಹರ ಮಾಡೆಕೃಪಾ ಶ್ರೀಮಧ್ವ ಮೊದಲಾದ ಆ ಮಹಾಮುನಿಗಳ ಸ್ತೋಮಸಂತತ ಮಹಾಪ್ರೇಮಮನದಲಿದ್ದು ಭೂಮಿತಳದೊಳಗಖಿಳಜನರಿಗೆ ಕಾಮಿತಾರ್ಥವ ಸಲಿಸಿ ತಾ ನಿ ಸ್ಸೀಮ ಮಹಿಮೆಯ ತೋರಿ ಇವರಿಗೆ ಆ ಮಹತ್ತರ ಕೀರ್ತಿಕೊಡುತಿಹ 1 ಆವಾವಜನುಮಗಳಲ್ಲಿ ಜಗಕೆ ಜೀವನಪ್ರದನಾಗಿ ಇಲ್ಲೀ ಶ್ರೀವರ ಸರ್ವೇಶ ಜೀವೇಶ ಸುರವಂದ್ಯ ದೇವ ನಿನ್ನಯ ಪಾದಸೇವಾವ ಸಲಿಸೆಂದೆ ಕೋವಿದರ ಕುಲಮಣಿಗಳೊಳಗೆ ಭಾವಿಪುದು ಸನ್ಮನವನಿತ್ತು ಗೋವಿದಾಂಪತೆ ಙÁ್ಞನಗಮ್ಯನೆ ಪಾವನಾತ್ಮಕ ಪರಮ ಪಾಲಿಸೋ 2 ದಾತ ಶ್ರೀ ಗುರುಜಗನ್ನಾಥವಿಠಲ ನೀ ಧಾತನಾಂಡಕೆ ಮುಖ್ಯನಾಥಾ ಧಾತಪ್ರಮುಖಸುರವ್ರಾತಸನ್ನುತಪಾದ ಪಾಥೋಜಯುಗಳ ಸಂಭೂತ ರಜೋದಿಂದ ಧೂತಪಾಪನ ಮಾಡುವದು ಅ ದ್ಭೂತ ಙÁ್ಞನ ವಿರಕುತಿ ಸಂಪ ದ್ಪ್ರಾತ ಪಾಲಿಸೊ ಹೇ ಮಹದ್ಭುತ ದಾತ ಎಂಬೆನೊ ನಮೋ ನಮೋ 3
--------------
ಗುರುಜಗನ್ನಾಥದಾಸರು
ದೇವನೀತ ಅವಧೂತ ಜೀವ ಜೀವ ಭಾವಭೋಕ್ತ ಕಾವ ದೈವ ಪ್ರಾಣನಾಥ ದೇವಾಧಿದೇವನೆ ಈತ 1 ಶ್ರೀದೇವ ದೇವ ನಿರ್ವಿಕಲ್ಪ ನಿರಾಕಾರ ನಿರ್ವಿಶೇಹ ನಿರಂತರ ಸರ್ವಸಾಕ್ಷಿ ಸರ್ವಾಧಾರ ಸರ್ವಾತೀತ ಸರ್ವೇಶ್ವರ 2 ಸಾಧುಜನರ ಹೃದಯ ಸದೋದಿತಾನಂದೋದಯ ಆದಿ ಅನಾದಿ ನಿಶ್ಚಯ ಇದೆ ಇದೆ ವಸ್ತುಮಯ 3 ಪತಿತಪಾವನ ಪೂರ್ಣ ಅತಿಶಯಾನಂದಗುಣ ಭಕ್ತಜನರುದ್ಧರÀಣ ಸತತ ಸುಖನಿಧಾನ 4 ಙÁ್ಞನಗಮ್ಯ ಗುಣಾತೀತ ಅನಾಥಬಂಧು ಗುರುನಾಥ ದಾತ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು