ಎನಗಾಧಿಯೋ ಗುರು ಅಧಿಯೋ ಧ್ರುವ
ಒಬ್ಬಗೆ ಶ್ರುತಿಪುರಾಣಾದಿ
ಒಬ್ಬಗೆ ಶ್ರೋತ್ರಾಧಿ ಒಬ್ಬಗೆ ಸ್ಮಾರ್ತಾಧಿ ಒಬ್ಬಗೆ ಜ್ಯೋತಿಷ್ಯದಾಧಿ
ಮಿತವಾಕ್ಯದಾಧಿ
ಶ್ರೀಪಾದದಾಧಿ 1
ಒಬ್ಬಗೆ ವೃತ್ತಾಧಿ ಒಬ್ಬಗೆ ವಿತ್ತಾಧಿ ಒಬ್ಬಗೆ ಸ್ತುತಿಸುವದಾಧಿ
ಯಂತ್ರ ಮಂತ್ರದಾಧಿ
ಒಬ್ಬಗೆ ಶೈವಾಧಿ ಒಬ್ಬಗೆ ಶಕ್ತ್ಯಾಧಿ ಒಬ್ಬಗಾಗಮಯುಕ್ತಿ ಆಧಿ
ಶ್ರೀಪಾದದಾಧಿ 2
ಒಬ್ಬಗೆ ಹಟದಾಧಿ ಒಬ್ಬಗೆ ದಿಟದಾಧಿ ಒಬ್ಬಗೆ ತಟಕೂಪದಾಧಿ
ಒಬ್ಬಗೆ ಪಟದಾಧಿ ಬಗೆ ಪಠಣ್ಯಾದಿ ಒಬ್ಬಗೆ ಮಠಮಾನದ್ಯಾಧಿ
ಒಬ್ಬಗೆ ಕುಟಲಾಧಿ ಒಬ್ಬಗೆ ಜಟದಾಧಿ ಒಬ್ಬಗೆ ಫಟಿಸುವ ಆಧಿ
ಶ್ರೀಪಾದದಾಧಿ 3
ಒಬ್ಬಗೆ ರಸದಾಧಿ ಒಬ್ಬಗೆ ಕಸದಾಧಿ ಒಬ್ಬಗೌಷಧಮಣಿ ಆಧಿ
ಒಬ್ಬಗೆ ಕೃಷದಾಧಿ ಒಬ್ಬಗೆ ದೇಶಿ ಆಧಿ ಒಬ್ಬಗೆ ಹುಸಿಹುಟ್ಟಣ್ಯಾಧಿ
ಒಬ್ಬಗೆ ವೃಷದಾಧಿ ಒಬ್ಬಗೆ ದ್ವೇಷಾಧಿ ಒಬ್ಬಗೆ ಪ್ರಶಂಸದಾಧಿ
ನಿಮ್ಮ ಶ್ರೀಪಾದದಾಧಿ 4
ಮನಕೆ ಮರೆಯಾಗಿ ಜನಕ ಠವಿಸುವ ಅನೇಕಪರಿ ಲೋಕದಾಧಿ
ಖೂನಕೆ ಬಾರದೆ ಙÁ್ಞನಕೆ ತಾನೊಂದು ಅನುಭವಕಿಲ್ಲದಾಧಿ
ಉಂಟಾಗಿಹ್ಯದಾಧಿ
ಮಹಿಪತಿಗೆ ಅಧಿ 5