ಮನ ಬಲಿಯದನಕ ಅನುಕೂಲಾಗದನುಭವ ಧ್ರುವ
ಮನವೇ ಮರೆಯ ಮಾಡೇದೆ ನೆನವಿಗೆ ತಾಂ ತಂದು ತೋರದೆ
ಹೆಣ್ಣ ಹೊನ್ನದಾಶೆ ಹಚ್ಚ್ಯಾದೆ ಘನತನಗರಸದೆ 1
ಹುಚ್ಚಮಾಡಿಬಿಟ್ಟದೆ ಎಚ್ಚರ ಎಡಿಯಗೊಡದೆ
ಕಚ್ಚಿ ವಿಷಯಕೆ ಬಿದ್ದದೆ ಬೆಚ್ಚಿ ಬೆದರದೆ 2
ಮನಸಿಗೆ ಮನಸಿನಿಂದ ಅನುಭವವಾಗಬೇಕಾನಂದ
ಘನ ಗುರುವಿನ ಕೃಪೆಯಿಂದ ಮನ ಬಲಿವುದು ಚೆಂದ 3
ಮನೋನ್ಮನವಾಗಿ ತಾ ಘನ ಬೆರೆದು ಸ್ವಹಿತ
ಙÁ್ಞನಕಿದೇ ತಾ ಸನ್ಮತ ಮುನಿಜನರ ಸುಪಥ 4
ಮನಬಲಿದು ನೀ ನೋಡೋ ಘನಸುಖ ಮಹಿಪತಿಗೊಡೊ
ಅನುಭವಾಮೃತ ಸೂರ್ಯಾಡೊ ಅನುಮಾನೀಡ್ಯಾಡೊ 5