ಮನದಿಂದಲಿ ಮನನೋಡಿ
ಮನವರಿತು ಘನ ಕೂಡಿ ಧ್ರುವ
ಮನಸಿನಿಂದ ತಾ ನೋಡುವ ಖೂನ
ಮನ ಮರೆಯಲದೆ ನಿಧಾನ
ಮನವರಿಯದೆ ಇಹುದ್ಯಾತರ ಜ್ಞಾನ
ಮನವೇ ಸ್ವಹಿತ ಕಾರಣ 1
ಮನದ ಕೊನಿಯಲಿದೆ ಘನಸುಖದಾಟ
ಅನುದಿನ ನೋಡುದು ನೀಟ
ಸ್ವಾನುಭವದಲಿದು ನೋಡುವ ನೋಟ
ಮುನಿಜನರ ಸುಖದೂಟ 2
ಮನೋನ್ಮನದೊಳಗದೆ ಘನಸ್ಫೂರ್ತಿ
ಙÁ್ಞನಕಿದೆ ಮನೆ ವಾರ್ತಿ
ಮನದೊಳಗಿಹ್ಯ ಮಹಿಪತಿ ಗುರುಮೂರ್ತಿ
ಮನಕಾಗಿಹ ತಾಂ ಸಾರ್ಥಿ 3