ಬನ್ನ ಬಡಿಸುವುದು:ಖನೀಗುವಂತೆ ಸಿರಿ
ಮನ್ನಣೆಯ ಪಡಿಯ ಕಂಡ್ಯಾಮನವೆ ಪ
ಘನ್ನವಿದ್ಯದಮಬ್ಬಿಲಿನ್ನ ಖಳಜಗದ ಜೀ
ವನ್ನ ಮಲಗಿದೆರೊಳಗ ಮುನ್ನ ಮಾಡಿದ ಸುಕೃತ
ಪುಣ್ಯ ತಂಗಾಳಿ ಸಂಪನ್ನ ಗುರು ಕರುಣೋದಯ
ದುನ್ನತೆಯ ಬೆಳಗು ಕಂಡು
ಸನ್ನುತುದಯರಾಗಸ್ತವನ್ನು ಪಡುತಜ್ಞಾನ
ಚನ್ನ ನದಿಯೊಳುಮಿಂದು ತನ್ನ ಸಂಚಿತದ ತ್ರೈಯ
ಘ್ರ್ಯನ್ನೆರದು ಮೆರುವುತಿಹ ನಿನ್ನ ಸಿರಿಕರ ನೋಡು
ಇನ್ನು ನಾಚಿಕೆ ಬಾರದೇ 1
ಬಂದು ನರದೇಹದಲಿ ನಿಂದಾಗ್ರ ಜನ್ಮದಲಿ
ಹೊಂದುಪಥವನೆ ಬಿಟ್ಟು ಛಂದ ಹೊಲಬದಿ ಕೆಟ್ಟು
ಮಂದಮತ ತನವೆರಿಸಿ ಮಂದಿಯೊಳಗಲ್ಲೆನಿಸಿ
ಪರಿ ಪರಿಯ ಬಯಸೀ
ಬೆಂದ ವಡಲನೆ ಹೊರೆದಿ ಕುಂದದಾಟಕೆ ಬೆರೆದಿ
ತಂದಾಯುಷವ ಹೊತ್ತು ಇರದಯೇರಿತು ಬೆರೆತು
ಮುಂದ ನಿನ್ನಯ ಗತಿಯ ಯಂದು ಘಳಿಸುವೆ ಸ್ಥಿತಿಯಾ
ಇಂದಿರೇಶನ ವಲುಮೆಯಾ 2
ಮರಹು ಮುಸುಕವ ತೆಗೆದು ಅರಹುನಯನವ ತೆರೆದು
ಪರಮ ಭಾವನೆ ಬಲಿದು ವರ ಭಕುತಿಗಳ ಜಡಿದು
ತರಣೋಪಾಯವ ಕೂಡು ಹರಿಯ ಸೇವೆಯ ಮಾಡು
ನೆರೆ ಸಾಧು ಸಂಗ ಬೇಡು
ಸುರಸ ಬೋಧವ ಕೇಳು ಸರಕುಮಾತನೆ ಕೀಳು
ಧರಿಯೊಳಗ ಸಾರ್ಥಕಲಿ ಪರಿಬಾಳುತಲಿರಲಿ
ಗುರು ಮಹಿಪತಿಸ್ವಾಮಿ ಹೊರೆವದಯದಲಿ ನೇಮಿ
ಶರಣ ಜನರಂತರ್ಯಾಮೀ 3