ಕಂಡೆ ನಾನೊಂದು ಕೌತುಕವ ಧ್ರುವ
ಭೂಮಿಯ ವೇದನೋದುದ ಕಂಡೆ ರಾಗಭೆÉೀದ ಮಾಡುದಕಂಡೆ
ಪಾಡುದು ನಾಕಂಡೆ 1
ಆಕಾಶ ಮಾತುಕೇಳುದು ಕಂಡೆ ಪುರಾಣ ದೃಷ್ಟಿಸುವದು ಕಂಡೆ
ಶಬ್ದ ಭೇದಗ್ರಹಿಸುದು ಕಂಡೆ ಪುಣ್ಯ ಶ್ರವಣವು ಕೇಳುದುಕಂಡೆ 2
ಖಣಿಯವಾದುದು ಕಂಡೆ
ನಿರ್ಮಿತವಾಗಿಹ ರೂಪವ ಕಂಡೆ 3
ಅಗ್ನಿ ದೃಷ್ಟಿಸುವದು ಕಂಡೆ ಸೃಷ್ಟಿನೆಲ್ಲ ನೋಡುವದು ಕಂಡೆ
ದೈವದ್ಯಾವರ ನೋಡುದು ಕಂಡೆ 4
ಗಾಳಿ ಘ್ರಾಣಿಸುವದು ಕಂಡೆ ಪರಿಪರಿವಾಸನೆ ಕೊಂಬುದುಕಂಡೆ
ಬೀಜಾಕ್ಷರವು ನುಡಿವದು ಕಂಡೆ 5
ಎರಗಿತು ಪುಣ್ಯಶ್ರೀ ಚರಣದಲಿ
ತ್ರಾಹಿಯೆಂದು ಪೊಡವಿಯಲಿ 6
ಬೆರಗಾದನು ಗುರುಕರುಣದಲಿ
ಬೆಡಗವ ಕಂಡಿನ್ನು ಬೆರದಾದೆನಯ್ಯ 7