ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದೇವ ಏನು ಬೇಡುವುದಿಲ್ಲ ನಾನು ನಿನ್ನ ಬೇಡುವೆ ಭವಭವದಿದನೆ ಕೊಡು ನೀನು ಪ ಶಿರ ನಿನ್ನ ಚರಣದಿ ಎರಗಲಿ ಕರ್ಣ ಹರಿಕಥೆಕೀರ್ತನೆ ಶ್ರವಣ ಮಾಡಲಿ ಪರಮಾತ್ಮಮೂರ್ತೆನ್ನ ನೇತ್ರ ನೋಡಲಿ ನಾಸಿಕ ಘ್ರಾಣಿಸಲಿ 1 ವÀದನ ನಿನ್ನನು ಸ್ತುತಿಸಲಿ ನಿನ್ನ ಜಿಹ್ವೆ ಕೊಂಡಾಡಲಿ ಹೃದಯವು ತವನಾಮ ತುಂಬಿಕೊಳ್ಳಲಿ ಮಧುಸೂದನನ ಪ್ರಸನ್ನತೆ ಮನವು ಬಯಸಲಿ 2 ಕರ ನಿನ್ನ ಚರಣಮಂ ನಿರುತ ಪೂಜಿಸಲಿ ದ್ವಯ ಚರಣಗಳುನುದಿನ ಯಾತ್ರೆಗೈಯಲಿ ಪರಿಪರಿ ತವಲೀಲೆಯೊಳು ಬುದ್ಧಿ ನಿಲ್ಲಲಿ ಎನ್ನ ಶರೀರ ಶ್ರೀರಾಮನ ಚರಣಕೊಪ್ಪಲಿ 3
--------------
ರಾಮದಾಸರು
ನಾ ನಿನಗೇನು ಬೇಡುವುದಿಲ್ಲ-ಎನ್ನಹೃದಯಕಮಲದೊಳು ನೆಲೆಸಿರು ಹರಿಯೆ ಪ ಶಿರ ನಿನ್ನ ಚರಣಕ್ಕೆರಗಲಿ-ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ಕರಣ ಗೀತಂಗಳ ಕೇಳಲಿ-ನಾಸಿಕನಿರುಮಾಲ್ಯಾನುದಿನ ಘ್ರಾಣಿಸಲಿ ಹರಿಯೆ 1 ನಾಲಿಗೆ ನಿನ್ನ ಕೊಂಡಾಡಲಿ-ಎನ್ನ ತೋಳು ಕರಂಗಳ ಮುಗಿಯಲಿ ಹರಿಯೆ ಕಾಲು ತೀರ್ಥಯಾತ್ರೆಗೆ ಪೋಗಲಿ-ಮನಬಲ್ಪಿನಿಂದಲಿ ನಿನ್ನ ಸ್ಮರಿಸಲಿ ಹರಿಯೆ 2 ಚಿತ್ತ ನಿನ್ನೊಳು ಮುಳುಗಾಡಲಿ ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ವೃತ್ತಿ ತತ್ವಯೋಗಾಭ್ಯಾಸಕ್ಕಾಗಲಿ-ರಂಗ ವಿಠಲ ನಿನ್ನ ದಯವಾಗಲಿ ಹರಿಯೆ 3
--------------
ಶ್ರೀಪಾದರಾಜರು
ನಾ ನಿನಗೇನ ಬೇಡುವುದಿಲ್ಲ - ಎನ್ನಹೃದಯಕಮಲದೊಳು ನೆಲಸಿರು ಹರಿಯೆ ಪಶಿರ ನಿನ್ನ ಚರಣಕೆರಗಲಿ -ಚಕ್ಷುಎರಕದಿಂದಲಿ ನಿನ್ನ ನೋಡಲಿ ಹರಿಯೆ ||ನಿರುಮಾಲ್ಯ ನಾಸ ಘ್ರಾಣಿಸಲಿ -ಎನ್ನಕರಣ ಗೀತಂಗಳ ಕೇಳಲಿ ಹರಿಯೆ 1ನಾಲಗೆ ನಿನ್ನ ಕೊಂಡಾಡಲಿ ಎನ್ನತೋಳು ಕರಂಗಳ ಮುಗಿಯಲಿ ಹರಿಯೆ ||ಕಾಲು ತೀರ್ಥಯಾತ್ರೆಗೆ ಪೋಗಲಿ -ಮನಓಲೈಸಿ ನಿನ್ನನು ಸ್ಮರಿಸಲಿ ಹರಿಯೆ 2ಚಿತ್ತ ನಿನ್ನೊಳು ಮುಳುಗಾಡಲಿ -ನಿನ್ನಭಕ್ತ ಜನರ ಸಂಗ ದೊರಕಲಿ ಹರಿಯೆ ||ತತ್ತ್ವಯೋಗಾಭ್ಯಾಸಕ್ಕಾಗಲಿ -ಉಕ್ಕಿಸತ್ಯ ಮೂರುತಿ ನಮ್ಮಪುರಂದರವಿಠಲ3
--------------
ಪುರಂದರದಾಸರು