ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಹರಿ ವಿಮುಖನಾದ ಮನುಜಶ್ವಪಚ ಶ್ರೇಷ್ಠನು | ಹರಿವಲುಮೆ ಕಂಡ ನರನು ಪರಮ ಶಿಷ್ಠನು ಪ ಹರಿಯ ಕಾಣದ ಕಣ್ಣು ನೌಲಗರಿಯಾ ಕಣ್ಣವು | ಹರಿಯ ಕಥೆ ಕೇಳದ ಶ್ರವಣಾ ಬಧಿರ ಶ್ರವಣವು | ಹರಿಯ ನಿರ್ಮಾಲ್ಯ ಕೊಳದ ಘ್ರಾಣ ಲೆತ್ತಿ ಘ್ರಾಣವು | ಹರಿಗೆರಗದಂಗ ತ್ರಾಣ ಬೆಚ್ಚಿನ ತ್ರಾಣವು 1 ಹರಿಯನ್ನದ ಮುಖವು ರಾಜ ಬಿರದ ಮುಖಗಳು | ಹರಿಸೇವೆ ಮಾಡದ ಕೈಯ್ಯಾ ಕೀಲಿ ಕೈಗಳು | ಹರಿಯಾತ್ರೆ ಇಲ್ಲದ ಕಾಲು ಹೊರಸಿನ ಕಾಲ್ಗಳು | ಹರಿ ವಿಷಯ ವಿಲ್ಲದ ವಿದ್ಯೆದೊಂಬನ ವಿದ್ಯಗಳು 2 ಹರಿಗರ್ಪಣೆ ಅಲ್ಲದಯಜ್ಞ ವೇಷಿಕ ಕರ್ಮವು | ಬರುದೇ ಮೌನ ವೃತಗಳೆಲ್ಲ ಬಕನ ಧರ್ಮವು | ಹರಿಭಕ್ತಿರಹಿತ ತಪದಿ ಬಿಡದು ಜನ್ಮವು | ಗುರು ಮಹಿಪತಿಸ್ವಾಮಿ ಭೋಧಿಸಿದನು ಮರ್ಮವು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು