ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ
ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ
ಕಂಡು ಬೆದರುವ ಷಂಡನಲ್ಲವೊ
ಪುಂಡರೀಕ ಲೋಚನನೇ ದೊಡ್ಡ 1
ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ
ನೊಂದರೂ ಗೋವಿಂದ ನಿನ್ನನು
ಬಂಧುವೆಂದು ನಂದದಿ ಪೊಗಳುವ 2
ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ
ಲೇಶ ಎನ್ನನು ಪೋಷಿಸುವನೆಂದು
ಘೋಷಿಸುವೆನೋ ಶೇಷಶಯನನೇ 3
ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ
ಜಾನಕೀಶನೆ ನೀನು ಎನ್ನಯ
ಮಾನರಕ್ಷಕನೆಂದು ಅರಿಯುವ 4
ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ
ಸೊನ್ನೆಯಾದರು ನಿನ್ನ ಪಾದಗ
ಳನ್ನು ಬಿಡೆನೊ ಪ್ರಸನ್ನ ಮೂರುತಿ 5