ಒಟ್ಟು 5 ಕಡೆಗಳಲ್ಲಿ , 5 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜನಕನೇನೆನುತೆನ್ನ ಘನವಂತನಿವೆನೆಂದು ಮನದÀಂದು ಬಳಿಸಂದು ಕೊಟ್ಟನಿಂದು ವೇಷವನು ನೋಡಿದೊಡೆ ಋಷಿಯಂದಮಾಗಿಹುದೆ ಭಾಷೆಯಿಂ ಭಾವೆಯೊಲು ಭಾಸಮಹುದೆ ಚರ್ಯೆಯಿಂ ಭೂಭುಜನ ಪರ್ಯಾಯದಿಂದಿಹನೆ ವನಿತೆಯನು ಸಂತವಿಸ ಲರಿಯದವನು ವನಮೂಲ ಫಲವತಿಂದು ವಾಸಿಪಂಥದೊಳಾನೆ ಶೂರನೆಂದು ಘೋಷಿಸುವ ಶೇಷಗಿರಿವಾಸನೆಂದು
--------------
ನಂಜನಗೂಡು ತಿರುಮಲಾಂಬಾ
ನಿನ್ನವಳೆನಿಸೊ ಎನ್ನ ಘನ್ನ ಗೋಪಾಲ ನಿನ್ನವಳೆನಿಸೊ ಎನ್ನ ಪ. ಅನ್ಯರೊಬ್ಬರ ಕಾಣೆ ಮನ್ನಿಸುವರ ಜಗದಿ ನಿನ್ನ ಹೊರತು ಇಲ್ಲ ಪನ್ನಗಾದ್ರಿವಾಸ ಅ.ಪ. ಜನನ ಮರಣ ಕಷ್ಟ ಘನಭವ ಜಲಧಿಯೊಳ್ ಮುಣಗಿ ಮುಣಗಿ ದಡವನು ಕಾಣದಿರುವೆನೊ 1 ದುಷ್ಟ ವಿಷಯಗಳ ಅಟ್ಟಿ ದೂರದಿ ನಿನ್ನ ಶ್ರೇಷ್ಠ ನಾಮಾಮೃತ ಕೊಟ್ಟು ಪುಷ್ಟಿಯನಿತ್ತು 2 ಭಕ್ತಿ ಜ್ಞಾನವು ನಿನ್ನ ಭಕ್ತ ಸಂಗವು ವಿ- ರಕ್ತಿ ಪಥವ ತೋರಿ ಮುಕ್ತಿಯ ಪಾಲಿಸಿ 3 ನಿತ್ಯ 4 ಸಾರ ಉದ್ಘೋಷಿಸುವಂತೆ ಬುದ್ಧಿಪ್ರೇರಕನಾಗಿ ಶುದ್ಧ ಜ್ಞಾನವನಿತ್ತು 5 ನಿನ್ನ ಪದುಮ ಪಾದವನು ನಂಬಿದ ಎನ್ನ ನಿನ್ನ ದಾಸಳೆನಿಸಿ ಘನ್ನ ಮಾರ್ಗವ ತೋರಿ6 ಅಂತರಂಗದ ಧ್ಯಾನ ನಿಂತು ನೀ ನಡಿಸುತ ಅಂತರಂಗದಿ ನಿನ್ನ ಶಾಂತರೂಪವ ತೋರಿ 7 ತಂದೆ ಮುದ್ದುಮೋಹನ ಗುರುಹೃದಯ ಮಂದಿರ ನಿವಾಸ ಎಂದೆಂದಿಗಗಲದೆ 8 ಗೋಪಾಲಕೃಷ್ಣವಿಠ್ಠಲದೇವ ಸರ್ವೇಶಆಪನ್ನಿವಾರಕ ಆಪದ್ಭಾಂದವನಾಗಿ9
--------------
ಅಂಬಾಬಾಯಿ
ಪೋತನ ಪಾಲಿಸೋಪವಮಾನಾ | ಈ ಭೂತಳದೊಳು ನಿನ್ನ ಖ್ಯಾತಿ ಘುನಾ ಪದರಿಗೆ ಬಿದ್ದವನೆಂದು ಗ್ರಹಿಸೋ 1 ತಾಯಿಯು ಇಲ್ಲದ ಬಾಲಕನು | ಇವನ ಕಾಯಲು ನೀ ದಯಾ ಸಾಗರನು 2 ಶ್ವಾಸದೊಡಿಯ ನೀನೆಂತೆಂದು | ಶೃತಿ ಘೋಷಿಸುವದು ಆನತ ಬಂಧು3 ಶಿಶುವಿಗೊಲಿದು ನೀ ಸಲಹಿದರೆ | ದೇವ ಖರೆ 4 ಗ್ರಾಮ ಬಲ್ಲಿಟಗಿ ಕೃತವಾಸ | ಶಿರಿಶಾಮಸುಂದರನ ಪ್ರಿಯದಾಸ 5
--------------
ಶಾಮಸುಂದರ ವಿಠಲ
ಭಂಡನೆಂದು ಎನ್ನ ನೀ ತಿಳಿಯೋ ಅಖಿಲಾಂಡನಾಯಕ ಪ ತಂಡ ತಂಡದಿ ಒದಗಿ ಬರುತಿಹ ಗಂಡ ಸಂತತಿ ನಾ ಕಂಡು ಬೆದರುವ ಷಂಡನಲ್ಲವೊ ಪುಂಡರೀಕ ಲೋಚನನೇ ದೊಡ್ಡ 1 ಮಂದ ಮಾನವರಿಂದ ನುಡಿಸುವ ನಿಂದೆ ವಚನಗಳಿಂದ ಮನ ನೊಂದರೂ ಗೋವಿಂದ ನಿನ್ನನು ಬಂಧುವೆಂದು ನಂದದಿ ಪೊಗಳುವ 2 ದ್ವೇಷಿ ಜನಗಳೂ ರೋಷದಿಂದಲಿ ಶೋಷಿಸಿದರೂ ನೀ ಕಮ ಲೇಶ ಎನ್ನನು ಪೋಷಿಸುವನೆಂದು ಘೋಷಿಸುವೆನೋ ಶೇಷಶಯನನೇ 3 ಹೀನ ಮಾನವರಿಂದ ನೀ ಅವಮಾನ ನೀಡಿದರೂ ವರ ಜಾನಕೀಶನೆ ನೀನು ಎನ್ನಯ ಮಾನರಕ್ಷಕನೆಂದು ಅರಿಯುವ 4 ಸಣ್ಣ ಮಾನವರಿಂದ ಎನ್ನಯ ಸಕಲ ವೈಭವವು ದೊಡ್ಡ ಸೊನ್ನೆಯಾದರು ನಿನ್ನ ಪಾದಗ ಳನ್ನು ಬಿಡೆನೊ ಪ್ರಸನ್ನ ಮೂರುತಿ 5
--------------
ವಿದ್ಯಾಪ್ರಸನ್ನತೀರ್ಥರು
ರಂಗಧಾಮ ಭುಜಂಗ ಶಯನ ಮಂಗಳಾತ್ಮಕನೆ ಶ್ರೀಶನೆ ಪ ಗಂಗಾಜನಕ ಉತ್ತುಂಗ ಮಹಿಮನೆ ಸಂಗರಹಿತನೆ ಭಂಗಹರಿಪನೆ ಅ.ಪ ಶ್ರೀಶ ನಿನ್ನನು ಪ್ರಾರ್ಥಿಪರಘ ಶೋಧಿಸೆನುತ ಶ್ರೀ ಸಮೇತರಾಗಿ ಭಕ್ತರ ಪೋಷಿಸೆನ್ನುತ ವಾಸುದೇವ ಅನಂತಮಹಿಮ ಶ್ರೀಶನೆನ್ನುತ ದಾಸರೆಲ್ಲರು ಘೋಷಿಸುವರು ಶೇಷಶಯನ ರಕ್ಷಿಸೆನುತ 1 ಸಾಧುಜನ ಹೃದಯವಾಸನೆನ್ನುತ ಪೇಳ್ವರೊ ಸಾಧನ ಜೀವರಿಗೆ ಪರಮಪ್ರಿಯನೆಂಬರೊ ಮೋದತೀರ್ಥ ಸುಧಾರಸ ಸೇವಿಸಿರೆಂಬರೋ ಆದಿ ಪುರುಷ ಅನಾದಿ ಅನಂತ ಮಹಿಮನೆಂಬರೊ2 ಅಕ್ಷಯಗುಣ ಪೂರ್ಣಸರ್ವರ ರಕ್ಷಿಸೆನ್ನುತಲಿ ಲಕ್ಷ್ಮಿಪತಿಯೆ ಪ್ರಾರ್ಥಿಸುವೆನು ಈಕ್ಷಿಸೆನುತಲಿ ಪಕ್ಷಿವಾಹನವೇರಿ ಮೆರೆವ ಅದೋಕ್ಷಜನೆನುತಲಿ ನಿತ್ಯ ನಿತ್ಯದಲಿ 3 ಶೋಭಿಪ ನಿನ್ನ ರೂಪ ಹೃದಯದಲಿ ಕಾಣಲು ಶೋಭಕೃತು ಸಂವತ್ಸರದಲಿ ನಿನ್ನ ಪಾಡಲು ಶೋಭನಂಗಳನ್ನೆ ಕೊಡುವ ಸ್ವಾಮಿ ಎನ್ನಲು 4 ಕಡಲಶಯನ ಮೃಡನ ಸಖನೆ ಬಿಡದೆ ರಕ್ಷಿಸು ತಡೆಯದೆ ನಿನ್ನ ಚರಣ ಸ್ಮರಣೆ ಬಿಡದೆ ಕರುಣಿಸು ಬಿಡದಲೇ ಬಹಮನದ ತಾಪವೆಲ್ಲ ನೀಗಿಸುಕಡಲೊಡೆಯನೆ ಕಮಲನಾಭ ವಿಠ್ಠಲ ಪಾಲಿಸು 5
--------------
ನಿಡಗುರುಕಿ ಜೀವೂಬಾಯಿ