ಶಾಂತಿಯೆಂಬುದು ಸಕಲ ಸದ್ಗುಣಂಗಳ ಮುಕುಟ
ಶಾಂತಿಯೊಂದಿರಲು ಕೃತಾಂತನಂಜಿಕೆಯಿಲ್ಲ ಪ
ಶಾಂತಿಯೆ ಪ್ರದ್ವೇಷ ಕಾಂತಾರ ಪಾವಕವು |
ಶಾಂತಿ ಕಾಂತಿಯು ದುರಿತಧ್ವಾಂತ ಓಡಿಸುವದು
ಚಾಪ | ಮೊದಲಾದ ದು |
ರಂತ ಶಸ್ತ್ರಾಯುಧಗಳು
ಶಾಂತಿ ಖಡ್ಗಕೆ ಶರಣು ಹೊಡೆಯುತಿಹವು 1
ಶಾಂತಿಗೊಪ್ಪದ ಕುರುಪ ಭ್ರಾಂತಿಯಲಿ ತನ್ನ
ಸಂತತ ಸಹಿತವಾಗಿ ಸಂಗರದಿ ಹತನಾದ
ಶಾಂತಿಯಿಂದಲಿ ಧರ್ಮ ಚಿಂತೆಯನು ನೀಗಿದನು
ಶಾಂತಿಯಿಂದಲಿ ಸತ್ಯ ಹರಿಶ್ಚಂದ್ರಗಾಧಿಪ ಜನ
ಪೌರುಷÀವೆಲ್ಲ ನಿಸ್ತೇಜಗೊಳಿಸಿದನು 2
ಶಾಂತಿಯಲಿ ಭಕ್ತಿ ಮುಕ್ತಿ ಇಂತೆಂದು ವೇದಗಳು
ಅಂತ್ಯದಲಿ ತ್ರೈವಾರ ಘೋಷಿಸುತಲಿಹವು
ಶಾಂತಮೂರುತಿಯಾದ ಶ್ರೀ ಶಾಮಸುಂದರನು
ಶಾಂತಿಗೆ ಮೆಚ್ಚಿ ಅಚ್ಯುತಪದವೀವಾ 3