ಶಾಮಸುಂದರ ಮಾಮನೋಹರ ತಾಮರಸಾಕ್ಷ ಪ
ಪ್ರೇಮದಿ ಕೊಡು ಕಾಮಿತಾರ್ಥವ ಭೂಮಿವಲ್ಲಭ ಅ.ಪ
ಮಾನವಿಲ್ಲದೆ ಹೀನ ನೃಪರನು ನಾನಾ ಪರಿಯಲಿ
ಶ್ವಾನನಂದದಿ ನಾನು ಸೇವಿಸಿ ದೀನನಾದೆನೊ 1
ದಾನ ಧರ್ಮಗಳೇನು ಮಾಡದೆ ಮಾನನೀಯರ
ಸಾನುರಾಗದಿ ನಾನು ಕೂಡಿದೆ ಜ್ಞಾನವಿಲ್ಲಾದೆ 2
ದಾಶರಥಿ ನೀ ಬೇಸರೀಸುತ ಘಾಸಿಗೈಯ್ಯಲೂ
ಘೋಷಿಪರ್ಯಾರೊ ವಾಸವನುತ ರಂಗೇಶವಿಠಲನೆ 3