ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು