ಒಟ್ಟು 5 ಕಡೆಗಳಲ್ಲಿ , 4 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜೋಗಿ ಬಂದ ಕಾಣೇ ಈತ ಮಹಾಯೋಗಿ ಬಂದ ಕಾಣೇ ಗಗನ ಮಣಿಯ ಮೀರುವ ತೇಜದ ದತ್ತ ದಿಗಂಬರ ನೆನಿಪೆ ನೋಡಮ್ಮಾ ಪ ತವೆ ಸಂಜೆ ಧಾರೆಗಳು ಹೊಳೆವ ಲೊ ಪ್ಪುವ ಕೆಂಜೆಡಿಯಗಳು ಕುವಲಯ ಶಾಮನು ಕಿರೀಟ ಕುಂಡಲದಿಂದ ಠವಠವಿಸುವ ಮೊಗದಾ ನೋಡಮ್ಮಾ 1 ಕೇಶರ ಗಂಧವನು ನುಂಪಿಟ್ಟು ತ್ರಿಸರೋಜ ಮಾಲೆಯನು ಭೂಷಿತ ದಿವ್ಯಾಂಬರ ಕಾಂಚಿ ಧಾಮದಿ ಘೋಷಿಪ ಘಂಟೆಗಳು ನೋಡಮ್ಮಾ 2 ಮೆಟ್ಟಿದ ಪಾದುಕೆಯಾ ರತನದ ಬೊಟ್ಟಿಲಿ ಜಪ ಮಾಲೆಯಾ ನೆಟ್ಟನೆ ನೆನೆವ ರುದ್ಧರಿಸಲು ತಾರಕ ಸೃಷ್ಟಿಗೆ ಗುರುವಾಗಿಹ ನೋಡಮ್ಮಾ 3 ಆದಿ ಯೋಗವನು ಪ್ರಕಟಿಸಿ ಹಾದಿಯ ತೋರುವನು ದ್ವಾದಶ ನಾದದ ಭೇದ ತೋರುವ ಶಂಖ ನೂಡುತ ನಲಿಯುತಲಿಹ ನೋಡಮ್ಮಾ 4 ಮೂರ್ತಿ ಚಿ-ಹ್ನವನು ದೋರುವಾ ಶ್ರೀ ಮನೋರಮ ದೇವನು ನೇಮದ ಮಹಿಪತಿ ನಂದನ ಪ್ರಭು ಭಕ್ತ ಕಾಮಿತಾರ್ಥವ ನೀಡುವ ನೋಡಮ್ಮಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭಕ್ತವತ್ಸಲನೆಂಬ ಬಿರುದು ನಿನಗಿರಲು ಭಕ್ತಜನಾಪತ್ತಿಗ್ಯಾಕೆ ನೀ ಬರದಿರುವಿ ಪ ಮುಕ್ತಿದಾಯಕನೆಂಬ ಯುಕ್ತ ಬಿರದ್ಹೊತ್ತಿರುವಿ ಚಿತ್ತಜಪಿತ ಭಕ್ತರ್ಹೊತ್ತಿಗ್ಯಾಕಿಲ್ಲೋ ನಿತ್ಯ ಬಿಡದ್ಹೊಗಳುವ ಸತ್ಯ ವೇದೋಕ್ತಿಗಳು ವ್ಯರ್ಥವೇನಯ್ಯಾ 1 ದೋಷನಾಶನೆ ನಿನ್ನ ಸಾಸಿರನಾಮಗಳಿಂ ಘೋಷಿಪರು ಮನುಮುನಿ ಬೇಸರಿಲ್ಲದಲೆ ದಾಸಜನರಾಶಕ್ಕೆ ಬೇಸತ್ತ ಬಳಿಕ ನಿನ ಗೀಸು ಬಿರುದುಗಳಿರ್ದು ಲೇಶವೇನಯ್ಯಾ 2 ಪರಮ ಕರುಣಾಕರ ಶರಣಜನಮಂದಾರ ಚರಣಸ್ಮರಿಪರ ಘೋರದುರಿತಪರಿಹಾರ ಖರೆಯಿರ್ದರಿಗೆನ್ನ ದುರಿತಮಂ ಪರಿಹರಿಸಿ ಕರುಣದಿಂ ರಕ್ಷಿಸೈ ಧರೆಗಧಿಕ ಶ್ರೀರಾಮ 3
--------------
ರಾಮದಾಸರು
ಶಾಮಸುಂದರ ಮಾಮನೋಹರ ತಾಮರಸಾಕ್ಷ ಪ ಪ್ರೇಮದಿ ಕೊಡು ಕಾಮಿತಾರ್ಥವ ಭೂಮಿವಲ್ಲಭ ಅ.ಪ ಮಾನವಿಲ್ಲದೆ ಹೀನ ನೃಪರನು ನಾನಾ ಪರಿಯಲಿ ಶ್ವಾನನಂದದಿ ನಾನು ಸೇವಿಸಿ ದೀನನಾದೆನೊ 1 ದಾನ ಧರ್ಮಗಳೇನು ಮಾಡದೆ ಮಾನನೀಯರ ಸಾನುರಾಗದಿ ನಾನು ಕೂಡಿದೆ ಜ್ಞಾನವಿಲ್ಲಾದೆ 2 ದಾಶರಥಿ ನೀ ಬೇಸರೀಸುತ ಘಾಸಿಗೈಯ್ಯಲೂ ಘೋಷಿಪರ್ಯಾರೊ ವಾಸವನುತ ರಂಗೇಶವಿಠಲನೆ 3
--------------
ರಂಗೇಶವಿಠಲದಾಸರು
ಶೌರಿ ಪ ಪ್ರಾಣಪಂಚಶರೀರ ಜೀವ ಜಡ ನಿನ್ನೊಶವೊ ಅ.ಪ ನೀನೆಂತು ನಮ್ಮಲ್ಲಿ ನಿಂತು ಕುಣಿಸಿದರಂತು ಜ್ಞಾನೇಚ್ಛೆ ಯತ್ನಮನ ಕರಣದೇಹಾ ನಾನಾಪರಿ ಅಂತೆಂತು ಕುಣಿ ಕುಣಿದÀು ಕುಣಿಬೇಕು ಆನೊಲ್ಲೆನೆಂಬ ಶಕ್ತನ್ನ ನಾ ಕಾಣೆ 1 ತನುಛಾಯದಂದಲಿ ನಮ್ಮಿರವು ನೀ ಬಲ್ಲಿ ತನುಮನದ ಯತ್ನಗಳು ನಡಿವುದೇನೊ ಅನಿಮಿತ್ತ ಸಖ ನೀನು ಅನುಗಾಲ ನಮಗೆಂದು ಅನವರತ ಶ್ರುತಿರಾಸಿ ಘೋಷಿಪದು ನಂಬಿಹೆನು 2 ಕಾಲಕರ್ಮಾಲಯನೆ ಮೂಲ ನೀ ಸರ್ವಕ್ಕೆ ಫಲಾಕ್ಷಸಖ ನೀನು ವಿಮುಖನಾಗೆ ಕೀಳು ಚೇತನ ಜಾಲ ಅಚೇತನ ಸಮರಹುದೊ ಲೋಲ ಜಯೇಶವಿಠಲ ಸುಮ್ಮನೆ ಕೃಪೆಮಾಡೊ 3
--------------
ಜಯೇಶವಿಠಲ
ಹರಿಹರೀ ಎನ್ನ ದೋಷವಳಿಯೊ ಪ ಕರಿವರದ ಕೃಪೆಮಾಡು ನಿತ್ಯಮಿತ್ರನೆ ಕೃಷ್ಣ ಅ.ಪ. ಬೇಲಿ ಎದ್ದು ಹೊಲವ ಮೆದ್ದರೆ ಬ್ಯಾರಿನ್ನು ಪಾಲಿಪರು ಯಾರೆಯ್ಯ ಶೀಲರೊಡೆಯ ಫಾಲಾಕ್ಷಸಖ ನಿನ್ನ ಅಚುಂಬಿತ ಕಾರುಣ್ಯ ಶ್ರೀಲಕ್ಷ್ಮೀ ಶ್ರುತಿ ರಾಸಿ ವರ್ಣಿಪರೊ ಗುಣನಿಧಿಯೆ 1 ಯಾತನೆಲ್ಹಣ್ಣಾದೆ ಪೂತನಿಯ ಅಸುಹರನೆ ಪಾತಕಕೆ ಕೊನೆಗಾಣೆ ಪಾರ್ಥಸೂತ ಆತ್ಮಬಂಧುವೆ ಇನ್ನು ತಡಮಾಡೆ ತಡಿಲಾರೆ ಪೂತನ ಮಾಡೆನ್ನ ಪ್ರಾಣೇಶ ಪ್ರಿಯಬಂಧು 2 ದೋಷಪುಂಜನು ನಾನು ಶೇಷಶಯನನೆ ಬಲ್ಲ ಪೋಷಕನು ನೀನೆಂದು ವೇದರಾಸಿ ಘೋಷಿಪವು ಅನವರತ ಕಾಪಾಡು ಶ್ರುತಿವಾಕು ದೋಷಕರ ಜಯೇಶವಿಠಲನೆ ಮೈದೋರು 3
--------------
ಜಯೇಶವಿಠಲ