ಒಟ್ಟು 2 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅರಿತವರಿಗತಿ ಸುಲಭ ಹರಿಯ ಪೂಜೆ ಪ ಅರಿಯದವ ನಿರ್ಭಾಗ್ಯತರ ಲೋಕದೊಳಗೆ ಅ.ಪ. ಹೈಮಾಂಡ ಮಂಟಪವು ಭೂಮಂಡಲವೆ ಪೀಠ ಸೋಮ ಸೂರ್ಯರೆ ದೀಪ ಭೂರುಹಗಳು ಚಾಮರಗಳತಿ ವಿಮಲ ವ್ಯೋಮ ಮಂಡಲ ಛತ್ರ ಯಾಮಾಷ್ಟಕರಗಳಷ್ಟದಳದ ಪದ್ಮವುಯೆಂದು 1 ಮಳೆಯೆ ಮಜ್ಜನವು ದಿಗ್ವಲಯಂಗಳೇ ವಸನ ಮಲಯಜಾನಿಲವೇ ಶ್ರೀಗಂಧ ಧೂಪಾ ಇಳೆಯೊಳಗೆ ಬೆಳೆದ ಧಾನ್ಯಗಳೆಲ್ಲ ನೈವೇದ್ಯ ಥಳ ಥಳಿಪ ಮಿಂಚು ಕರ್ಪೂರದಾರತಿಗಳೆಂದು 2 ನಕ್ಷತ್ರ ಮಂಡಲವೇ ಲಕ್ಷ ದೀಪಾವಳಿಯು ದಕ್ಷಿಣೋತ್ತರ ಅಯನಗಳೇ ಬನವು ವೃಕ್ಷ ವಲ್ಲಿಜ, ಸುಫಲ ಪುಷ್ಪಗಳೊಳಗೆ ಲಕ್ಷ್ಮೀ ವಕ್ಷ ವ್ಯಾಪಕನಾಗಿ ತಾನೆ ಭೋಗಿಪನೆಂದು 3 ಗುಡುಗು ಸಪ್ತ ಸಮುದ್ರ ಸಿಡಿಲು ಘೋಷವೇ ವಾದ್ಯ ಪೊಡವಿಪರಿಗೀವ ಕಪ್ಪವೇ ಕಾಣಿಕೆಗಳು ಉಡುಪ ಭಾಸ್ಕರರ ಮಂಡಲಗಳಾದರ್ಶಗಳು ನಡೆವ ನಡೆಗಳು ಹರಿಗೆ ಬಿಡದೆ ನರ್ತನವೆಂದೂ 4 ಯುಗ ಚತುಷ್ಟಯವೆ ಪರಿಯಂಕ ಪಾದಗಳಬ್ದ ಬಿಗಿವ ಪಟ್ಟಿಗಳು ಕಂದಾಯ ಕಸಿ ಯೊ ಗಗನ ಮೇಲ್ಗಟ್ಟು ಸಂಕ್ರಮಣಗಳೇ ಬಡವುಗಳೂ ಭಗವಂತಗುಪಬರ್ಹಣಗಳು ಷಡೃತುಗಳೆಂದೂ 5 ನಾಗವಲ್ಲೆಗಳೆ ದಿವಸಗಳು ಕರಣವೇ ಕ್ರಮಕೆ ಯೋಗಗಳೇ ಚೂರ್ಣ ರಾತ್ರೆ ತಾಂಶೊಕ ಭೋಗವತೀ ಜಲವೆ ಗಂಡೂಷೋದಕ ಶುದ್ಧ ಸಾಗರವೆ ಪಾದೋದಕ ವಿರಾಡ್ರ್ರೂಪಗೆಂದು6 ಶಾತಕುಂಭೋಧರಾಂಡಾಂತಸ್ಥ ರೂಪ ಸಂ ಪ್ರೀತಿಯಿಂದಲಿ ಯಜಿಸಿ ಮೋದಿಪರನಾ ಮಿತ ಶೋಕರ ಮಾಡಿ ಸಂತೈಸುತಿಹ ಜಗ ನ್ನಾಥ ವಿಠಲ ಒಲಿದು ಸರ್ವ ಕಾಲಗಳಲ್ಲಿ 7
--------------
ಜಗನ್ನಾಥದಾಸರು
ಧೀಮಂತರ ದಯಪಡೆದು ಮಾಧವನ ಪದ ವಿಡಿದು | ಪ್ರೇಮದಿ ಭಜಿಸೆನ್ನ ಮನವೇ | ಪ ಕಾರ್ಮುಗಿಲದುಗ್ಧರಾಶಿಯನು ಶೃತಿಗೆ ಬೀಳಲ್ಪ | ಯೋರ್ಮನದಿ ಸಂತೋಷಿಪಂತೇ ನಿರ್ಮಳಾಂಗಣ ಕಥೆಯ ಘೋಷವೇನು ಕೇಳಿ ಅತಿ | ಪೆರ್ಮೆಯಿಂದಲೆ ನಲಿದು ಬಾಳು 1 ನೋಡಲಾಕ್ಷಣ ತನ್ನ ಮಾತೆಯನು ಮುದದಲಿಂ | ಲೋಡಿ ಬಪ್ಪುವ ಶಿಶುವಂತೆ | ರೂಢಿಯೊಳು ಸಜ್ಜನರ ಕಂಡಾಕ್ಷಣಕ ತನುವ | ನೀಡಿ ಸಾಷ್ಟಾಂಗದಿಂದೆರಗು 2 ಮಿಗಿಲಾಸೆಯನು ತ್ಯಜಿಸಿ ದಾಗಸದ-ಲಿಂಬರ್ವ | ನಿಗಳುಂಬ ಚಾತಕನ ತೆರದಿ | ಮುಗಳೆ ದಯದಿಂದ ಸಜ್ಜನ ಮುಖದಿ ಬಪ್ಪಬೋ | ಧೆಗಳ್ಪೊತನು-ವಾನುಗ್ರಹಿಸು ಧರಿಸು 3 ಮಣಿ ದೀಪವಾದಂತೆ ಸ | ಪಾದ ಕಮಲಗಳಾ | ಅತ್ಯಧಿಕ ಹರುಷದಿಂ ಹೃದಯದೊಳ್ ಧರಿಸಲ್ಕೆ | ಮೊತ್ತದ ಜ್ಞಾನ ತೊಳಗುವದು 4 ಗರ ಹೊಡೆದು | ಧರಿಯೊಳಗ ಗರ್ವಿಸಲಿ ಬ್ಯಾಡಾ | ಸಿರಿಯು ತೊಲಗಲು ಕುನ್ನಿಯಂತನ್ನ ದಾಸಿಂಗೆ | ಪರರು ಮನವಡಿದು ಬಳಲದಿರು 5 ಕಮಲಜನ ಪದಕ ಕತ್ತದೀವರ ಅನುಮತದ | ವಿಮಲಮಾರ್ಗ ಹೊಲಬ ನರಿದು | ಅಮಲೂಧ್ರ್ಪ ಪೌಂಡ್ರ ಹರಿ ಲಾಂಛನವು ತುಳಸಿ ಸರ ಕ್ರಮದಿಂದ ಧರಿಸಿ ಸುಖಿಯಾಗು 6 ಹರಿಪರದೈವವೆಂದು ಅರಿತು ಭಾವದಿ ನಿಂದು | ಹರಿ ಕೋಟಿ ನಿಭಕ ಮಿಗಿಲೆನಿಸಿ | ಮೆರೆವ ಮಹಿಪತಿ ನಂದನೋಡಿಯ ನಾಮಂಗಳನು | ಸ್ಮರಿಸಿ ಇರಳ್ಹಗಳ ಕೊಂಡಾಡು 7
--------------
ಕಾಖಂಡಕಿ ಶ್ರೀ ಕೃಷ್ಣದಾಸರು