ಒಟ್ಟು 5 ಕಡೆಗಳಲ್ಲಿ , 2 ದಾಸರು , 5 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಅಖಿಳ ಭವದುರಿತನೆ ಅಂಜನೆಯ ಸುತಗೆ ಆರೋಪಿಸಿದ ಬಳಿಕ ಪ ಪಾತಕವು ಬಿಡದೆಂದು ಪರಿಪರಿಯ ಚಿಂತಿಸುತ ಯಾತಕೆನ್ನಭಿಮಾನ ನಾಥನಿರಲು ಮಾತಪಿತರಲ್ಲಿ ನಿರ್ಮಿತಮಾಡಿ ನಿಲ್ಲಿಸಿದ ಆತನಾಜ್ಞೆಯಾದಂತೆ ಆಗುವುದಲ್ಲದೆ 1 ದುರಿತ ಘೋರಿಸುವೆನೆನುತಲಿ ಅಡ್ಡಬಂದಾಗ ಓಡಿಸುವೆನೆನುತ ಅಡ್ಡಬಂದಾಗಂತ್ಯ ಕಾಲದಲಿ ರಕ್ಷಿಸುವ ದೊಡ್ಡ ಕಂಗಳನೆಂಬ ಧೊರೆಯ ಹೊಂದಿದ ಮೇಲೆ 2 ಸೃಷ್ಟಿಯನು ಮಾಡಿದ ಇಷ್ಟ ದೇವತೆ ನಿಮ್ಮ ಬಿಟ್ಟವನೆ ಭ್ರಷ್ಟ ಚಿಂತೆಯು ಬೇಡವೋ ಕಷ್ಟಗಳ ಕಳೆವ ಕದರುಂಡಲಗಿ ಹನುಮಯ್ಯನ ನಿಷ್ಠೆಯಲಿ ಭಜಿಸಿ ನಿಶ್ಚಿಂತನಾಗಿರು ಮನವೆ 3
--------------
ಕದರುಂಡಲಗಿ ಹನುಮಯ್ಯ
ಏನೆಂದು ಬಣ್ಣಿಸಲಿ ಎಲೆ ಧನವೆ ನಿನ್ನ ಮಾಣುವ ವಿಷಯಸುಖ ಅಹುದೆನಿಪ ಪರಿಯ ಪ ಏರಿಸುವಿ ಹಿರಿಕುದುರೆ ತೋರಿಸುವಿ ದುರ್ಮದವ ಹಾರಿಸುವಿ ಸುವಿಚಾರ ಮೀರಿಸುವಿ ಸುಪಥ ದೂರಿಸುವಿ ಮಹನೀತಿ ಘೋರಿಸುವಿ ಬಡವರನು ಕಾರಿಸುವಿ ತಿಂದನ್ನ ಧಾರುಣಿಯೊಳು 1 ಮೆರೆಸುವಿ ಅಂದಣದಿ ಸುರಿಸುವಿ ದುರ್ವಚನ ನರಸುವಿ ಎಡಬಲದಿ ಪರಿಪರಿಯ ಜನರ ತರಿಸುವಿ ಸತಿಸುತರ ಇರಿಸುವಿ ಅರಮನೆಯೊಳ್ ಮರೆಸುವಿ ಮಹಿಮರ ಸಂದರುಶನದ ಸುಖವ 2 ವೇದಶಾಸ್ತ್ರಕಿಳಿಸುವಿ ವಾದನುಡಿ ಕಲಿಸುವಿ ನೀ ಸಾಧುಸಜ್ಜನರ ನಿಜಬೋಧ ತೋರಿಸುವಿಯೋ ಭೇದನಿಕ್ಕುತ ವೈರ ಸಾಧಿಸುತ ಪರಲೋಕ ಸಾಧನೆಯ ಕೆಡಿಸ್ಯಮಬಾಧೆಗಾನಿಸುವಿ 3 ತೊಡಿಸುವಿ ವಿಧವಿಧದ ಒಡವೆವಸ್ತ್ರಂಗಳನು ನುಡಿಸುವಿ ಕಡೆತನಕ ಕಡುದುಗುಡ ಬಡಿಸುವಿ ಬಲುಜಂಬ ನಡೆಸುವಿ ದುಷ್ಷಥದಿ ಕೆಡಿಸುವಿಯೋ ಸಲೆ ಪುಣ್ಯಪಡೆದ ನರಜನುಮ 4 ಇನ್ನೆಷ್ಟು ಬಣ್ಣಿಸಲಿ ನಿನ್ನ ಕರುಣದ ಗುಣವ ನಿನ್ನ ನಂಬಲು ಬಿಡದೆ ಕುನ್ನಿಯೆಂದೆನಿಸಿ ಪನ್ನಂಗಶಯನ ಮಮ ಸನ್ನುತಾಂಗ ಶ್ರೀರಾಮ ನುನ್ನತಂಘ್ರಿಯ ಧ್ಯಾನವನ್ನು ಅಗಲಿಸುವಿ 5
--------------
ರಾಮದಾಸರು
ಕಾಲವೆಂತು ಕಳೆಯಲೆನ್ನಯ್ಯ ಪ ಕಾಲಕಳೆಯಲೆಂತು ನಾನು ತಾಳಿಮೂಗುತಿ ಕಾಣದೊನಿತೆಯ ಹಾಳುಮುಖವ ನೋಡೆವೆಂದು ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ ಹೇಳಲಳವಲ್ಲ ಸೇರಿ ವಿಧ ವಿಧದಿ ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು ಆಳುವಂಥ ಮೂಲಪುರಷನಿಲ್ಲದಿನ್ನು 1 ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ ಮೂರು ಮಂದಿ ಊರ ಬೀದಿಯೊಳಗೆ ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ ಚೋರನೋರ್ವನು ಮೀರಿ ಬಾಧಿಪ ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ ಪಾರುಗಾಣೆನು ವ್ರತದಿ ಇನ್ನು 2 ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ ಸತಿಗೆ ಪರಮ ಗತಿಯ ಕೊಡಲಿಕ್ಕೆ ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು ಪತಿತ ಪಾವನೆನ್ನ ಪ್ರಾಣ ಶ್ರೀರಾಮ 3
--------------
ರಾಮದಾಸರು
ನಾರ್ಯೆಂಬ ಮಾರಿಯನು ಆರು ನಿರ್ಮಿಸಿದರೋ ಸೂರೆಗೊಂಡು ಮೂಲೋಕ ಘೋರಿಸುವುದುದಕಟ ಪ ಹರಿಯ ಧರೆಗಿಳಿಸಿತು ಹರನಕಾಡಿಗೆಳೆಸಿತು ಶಿರವೊಂದನೆಗರಿತುವರಬ್ರಹ್ಮನಕಟ1 ರಂಧ್ರಗೊಳಿಸಿತು ದೇವೇಂದ್ರನಂಗಾಂಗವನು ಚಂದ್ರನ ಮುಖಪ್ರಭೆಗೆ ಕುಂದಿಟ್ಟಿತಕಟ 2 ಅಸಮ ವಾಲಿಯ ಬಲಕೆ ಮಸಿ ಮಣ್ಣು ಹಾಕಿಸಿತು ದಶಶಿರನ ವರವಖಿಲ ಪುಸಿಯೆನಿಸಿತಕಟ 3 ಹಾರಿಸಿತು ಕೀಚಕನ ಕೌರವನ ಮನೆಮುರಿಯಿತು ಧೀರಪಾಂಡವರನು ತಿರಿದುಣಿಸಿತಕಟ 4 ನರಕಕ್ಕೆ ತವರಿದನು ಸ್ಮರಿಸಲಳವಲ್ಲೆನೆಗೆ ಹರಿದರಭಯ ತ್ವರಿತ ವರದ ಶ್ರೀರಾಮ 5
--------------
ರಾಮದಾಸರು
ಭಯ ನಿವಾರಿಸೋ ಜಯ ಶ್ರೀ ಹರಿಯೆ ಭಯ ನಿವಾರಿಸಯ್ಯ ದಯದಿ ಭಯ ನಿವಾರನೆನ್ನ ಪ ಮರವೆಯೆಂಬುವ ಇರುಳಿನಲ್ಲಿ ದುರಿತಯೆಂಬುವ ಗಿರಿಯಲ್ಲಿ ಪರನಿಂದೆಂಬುವ ಶರಧಿಯಲ್ಲಿ ಕರುಣವಿಲ್ಲದ ಕಾಯದುರ್ಗದರಣ್ಯಕಂಜಿ ಕೊರುಗುತಿರುವೆ ಹರಿಯೆ ನಿಮ್ಮ ಸ್ಮರಣವೆಂಬ ನಿರುತ ಧೈರ್ಯ ಕರುಣಿಸಭವ 1 ವ್ಯಸನವೆಂಬ ಮುಸುಕಿನಿಂದ ಪಿಸುಣತೆಂಬುವ ದಸಕಿನಿಂದ ಪುಸಿಯುಯೆಂಬುವ ಮಿಸುನಿಯಿಂದ ವಿಷಯದಾಸೆ ತಸ್ಕರಗಂಜಿ ದೆಸೆಗೆ ಬಾಯ ಬಿಡುವೆನಯ್ಯ ಅಸಮಮಹಿಮನ್ವ ಚಶ್ರವಣೆಂಬೆಸೆವ ಧೈರ್ಯ ಕರುಣಿಸಭವ 2 ಆರು ಹುಲಿಗಳ ಘೋರಿಸುವ ಮೂರು ಮರಿಗಳ ಹಾರುತಿರುವ ಮೂರೇಳು ನಾಯ್ಗಳ ಘೋರತಾಪ ಸೈರಿಸದೆ ಸಾರಸಾಕ್ಷ ಮರೆಯ ಹೊಕ್ಕೆ ಶ್ರೀರಾಮ ನಿಮ್ಮ ಚರಣ ಭಕ್ತೆಂ ಬ್ವೀರತನವ ಕರುಣಿಸಭವ 3
--------------
ರಾಮದಾಸರು