ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀ ಪಾದರಾಜರ ಶ್ರೀ ಪಾದಾರ್ಚನೆ ಮಾಳ್ಪ- ರೀ ಪೃಥುವಿಯೊಳು ಧನ್ಯರು ಪ ಗೋಪಿನಾಥ ಪದಾಬ್ಜ ಮಧುಪ ದ- ಯಾ ಪಯೋನಿಧಿ ಸುಜನರಂತಃ- ಸ್ತಾಪಹಾರಕ ಗೋಪ ಸಕಲ ಕ- ಲಾಪವಿದ ತಾಪತ್ರಯಾಪಹ ಅ.ಪ. ಊರೆಲ್ಲಿ ತೋರೆಷ್ಟು ದೂರದಲ್ಲಿಹುದೆಂದು ಹೀರ ವರ್ಣರು ಬಂದು ಕೇಳಲು ತೋರಿ ತುರುಗಳ ಗತಿಯ ಸೂರ್ಯನ ತೋರಿ ತಮ್ಮಯ ಪೋರ ವಯಸನು ಸೂರಿಗಳೇ ನೀವರಿಯರೆನ್ನುತ ಚಾರು ಉತ್ತರವಿತ್ತ ಧೀರರ 1 ಭೂದೇವನನು ಕೊಂದು ಬಾಧೆಗಾರದೆ ನೃಪ ತಾ ದೈನ್ಯದಲಿ ನಿಂದು ಬೇಡಲು ಪಾದ ಪದ್ಮಾ- ರಾಧನೆಯ ತೀರ್ಥವನು ಪ್ರೋಕ್ಷಿಸಿ ಆದರದಲೀಕ್ಷಿಸುತ ಭೂಪನ ಕಾದ ಕಾಂಚನದಂತೆ ಮಾಡಿದ 2 ಶಂಕಿಸಿ ದ್ವಿಜವೃಂದ ಆತಂಕಗೊಳ್ಳುತಲಿರೆ ಮಂಕುಗಳಾ ಡೊಂಕು ತಿದ್ದಲು ಬಿಂಕದಲಿ ತರಿಸಿ ಗೇರೆಣ್ಣೆ ಪಂಕದೊಳಗದ್ದಿರುವ ವಸ್ತ್ರಕೆ ಕಲುಷ ಹಾರಿಸಿ ಕಿಂಕರ ಮನಶಂಕೆ ಬಿಡಿಸಿದ 3 ಹರಿಗರ್ಪಿಸಿದ ನಾನಾ ಪರಿಯ ಶಾಖವ ಭುಂಜಿಸೆ ನರರು ತಾವರಿಯದೆ ಜರಿಯುತ್ತಿರೆ ಹರುಷದಿಂದಲಿ ಹಸಿಯ ವಸ್ತುಗ- ಳಿರವ ತೋರಿಸಿ ಮರುಳ ನೀಗಿಸಿ ಶರಣು ಶರಣೆನಲವರ ಪಾಲಿಸಿ ಮೆರೆದ ಬಹು ಗಂಭೀರ ಗುರುವರ 4 ಘೋರಾರಣ್ಯದಿ ದಿವ್ಯ ಕಾಸಾರ ನಿರ್ಮಿಸಿ ನಾರಸಿಂಹನ ನೆಲಸಿ ಊರು ಮಂದಿಯು ನೋಡುತಿರಲಾ- ವಾರಿ ಮಧ್ಯದಿ ಬಂದ ಗಂಗೆಗೆ ಸೀರೆ ಕುಪ್ಪಸ ಬಾಗಿನಂಗಳ ಧಾರೆಯೆರೆದಪಾರ ಮಹಿಮರ 5 ಫಣಿ ಬಂಧ ನಿವಾರಿಸಿ ಭಾಷಿಸಿ ಫಣಿಪನ್ನ ತೋಷಿಸಿ ಕಾಶಿ ಗಯಾ ಶ್ರೀ ಮುಷ್ಣದ್ವಾರಕ ಶೇಷಗಿರಿ ಮೊದಲಾದ ಪುಣ್ಯ ಪ್ರ- ದೇಶಗಳ ಸಂಚರಿಸಿ ಭಕ್ತರ ದೋಷರಾಶಿಯ ನಾಶಗೈಸಿದ 6 ಕಸ್ತೂರಿತಿಲಕ ಶ್ರೀಗಂಧ ಲೇಪನದಿಂದ ನಿತ್ಯ ಮಹೋತ್ಸವಗೊಳುತ ಮುತ್ತಿನಂಗಿಯ ಮೇಲ್ಕುಲಾವಿಯು ರತ್ನ ಕೆತ್ತಿದ ಕರ್ಣಕುಂಡಲ ಬಿತ್ತರದಿ ಧರಿಸುತ್ತ ರಥವನು ಹತ್ತಿ ಬರುತಿಹ ಸ್ತುತ್ಯ ಬಿರುದಿನ 7 ಆರ ಬೃಂದಾವನ ಸೇವೆಯ ಮಾಡಲು ಕ್ರೂರ ಭೂತಗಳೆಲ್ಲ ದೂರವು ಆರ ಬೃಂದಾವನದ ಮೃತ್ತಿಕೆ ನೀರು ಕುಡಿಯಲು ಘೋರಕ್ಷಯ ಅಪ- ಸ್ಮಾರ ಗುಲ್ಮಾದಿಗಳ ಉಪಟಳ ಹಾರಿ ಪೋಪುದು ಆ ಮುನೀಶ್ವರ 8 ಪರವಾದಿಗಳ ಬೆನ್ನುಮುರಿವ ವಜ್ರದ ಡಾಣೆ ಶರಣ ರಕ್ಷಾ ಮಣಿಯೆ ದುರಿತ ತಿಮಿರಕೆ ಮೆರೆವ ದಿನಮಣಿ ಎನಿಸಿ ಪೂರ್ವ ಕವಾಟ ನಾಮಕ ಪುರದ ನರಕೇಸರಿ ಕ್ಷೇತ್ರದಿ ಸ್ಥಿರದಿ ಶ್ರೀ ಕಾಂತನನು ಭಜಿಸುವ 9
--------------
ಲಕ್ಷ್ಮೀನಾರಯಣರಾಯರು
ಶ್ರೀ ಹರಿ ಹರಿಯೇ ಬಾರೋ ತ್ವರಾ ಘೋರಾರಣ್ಯದಿ ಸೇರಿ ದಾರಿ ತೋರದೀಗ ಸಾರಿಕರೆವೆ ಅ.ಪ ಪಾಶದಿಂದ ಮುಂದಕ್ಕೆ ಬಿಡದಲಿಹರು ನೊಂದು ಬೆಂದು ಬಾಯಿ ಬಿಡುವೆ 1 ಹಿಂದೆ ವ್ಯಾಘ್ರ ಮುಂದೆ ಪಾವು ನಿಂದು ಕಾದು ನೋಡುತಿಹವು ಬಂದು ನೀನು ಕಾಯದಿರಲು ತಂದೆ ಇನ್ನಾರುಗತಿಯೋ 2 ನಂದಸುತ ಗೋವಿಂದ ಶಾಮಸುಂದರನೆ ನಿನ್ನ ನಾಮ ಮಂದ ಭಾಗ್ಯನಾದೆನಯ್ಯೋ 3
--------------
ಶಾಮಸುಂದರ ವಿಠಲ
ಶ್ರೀವರ ಕೀರ್ತಿಯಂ ಅರ್ಥಿಯಿಂದಾಲಿಸೈ ಚಿತ್ತಶುದ್ಧಿಯಿಂ ಪ ಭಾವಿಸಿವಾರ್ತೆಯ ವ್ಯಾಸ ವಾಲ್ಮೀಕಿಯು [ಆವರ]ಶುಕ ಮನುಶ್ರೇಷ್ಠರೆಲ್ಲ ನಿತ್ಯಪಠಿಪರೋ ಅ.ಪ ಘೋರಾರಣ್ಯದಿ ತಿರುಗುತ್ತ ಶೌರ್ಯದಿ ಗೋಗ್ರಹಣವನು ಸಾಧಿಸುತಲಿ ಮೀರಿ ಸಂಧಿಕೇಳದ ದುರ್ಯೋಧನರ ಹತಗೈದ 1 ರಾಮನು ಕಾಡೊಳು ಮೃಗವನು ಮರ್ದಿಸಿ ಭೂಮಿಜೆಯಂ ತರೆ ರವಿಜನಿಂ ಆ ಮಹಾಸಾಗರವನು ಬಂಧಿಸಿ ಲಂಕಾ ಪ್ರೇಮಿಯನ್ನು ಕೊಂದು ಬಂದ ರಾಮಚರಿತಮಂ2 ದೇವಕಿಸುತ ಗೋಪೀಗೃಹವರ್ಧನ ಗೋವರ್ಧನಗಿರಿಯೆತ್ತಿದ ಮಾವಕಂಸಾದಿ ದುರ್ದೈತ್ಯರ ಖಂಡಿಸಿ ಸೇವಿಸುವ ಸಿಂಧುಗಳ ಸಲಹುವ ಜಾಜೀಶನು 3
--------------
ಶಾಮಶರ್ಮರು
ಮಾರ್ತಾಂಡಕುಲದೀಶ ದಶರಥನುದರದಿಪುತ್ರನಾಗಿಯೆ ಜನಿಸಿ ರಾಘವ ವಿಶ್ವಾಮಿತ್ರರೆಜÕವಪಾಲಿಸಿ ತಾಟಕೀ ಮುಖ್ಯಧೂರ್ತದೈತ್ಯರ ಮಥಿಸಿಅಹಲ್ಯೆದೇವಿಯ ಪಾಲಿಸಿ ಅರ್ಥಿಯಲಿ ವಿಥಿಲೇಖೆಗೆಗಮಿಸುತ ಪೃಥ್ವಿಜಾತೆಯನೊಲಿಸಿ ಮಾರ್ಗದಿ ಕಾರ್ತವೀರ್ಯಾಂತಕನ ಭಂಗಿಸಿ ತ್ವರಿತದಿಂದಯೋಧ್ಯೆಗೈಸಿದ ರಾಮಸೀತೆಗೆ ಮುತ್ತಿನಾರತೀಯ ಬೆಳಗೀರೆ ಶೋಭಾನೆ 1ಮಲತಾಯಿ ಕೈಕೆಯ ಮಾತಿಗೋಸುಗ ಪೋಗಿ ನೆಲಸಿದನಾರಣ್ಯದಿ ಪೋಗಿಮೃಗರಾಮ ತರಲುಪೋಗಲು ಭರದಿ ಸೀತೆಯ ರಾವಣೇಶನೊಯ್ಯಲುಮಾಯದೀ ರಾಮಲಕ್ಷ್ಮಣರ ವನದಿ ಚಲಿಸುತಲಿಕಪಿವರರ ಸ್ನೇಹದಿಜಲಧಿಬಂಧಿಸಿ ರಾವಣಾದ್ಯರಗೆಲಿದು ಶರಣಗೆ ಪಟ್ಟಗಟ್ಟುತ ಲಲನೆಸಹ ನಡೆತಂದಯೋಧ್ಯೆಗೆ ರಾಮಸೀತೆಗೆ ಹರಳಿನಾರತೀಯಾ ಬೆಳಗೀರೇ ಶೋಭಾನೆ 2ಚಂದದಿ ಧರಣಿಯ ಪಾಲಿಸುತಿರೆ ರಾಮನೊಂದಪವಾದವಕೇಳಿಸೀತೆಯ ಘೋರಾರಣ್ಯದಿ ಬಿಡಲು ಪೇಳಿ ಗರ್ಭಿಣಿ ಸೀತೆಬಂದ್ವಾಲ್ಮೀಕಿಯರೊಳು ಬಾಳಿ ಪಡೆದು ಲವಕುಶರನಲ್ಲಿಚಂದದಲಿ ಪಾಲಿಸುತಿರೆ ಗೋವಿಂದನೆಜ್ಞಾಶ್ವವನು ಬಂಧಿಸಿಬಂದು ಕಲಹದಿ ನಿಜವನರಿತಾ ನಂದನರ ಕರೆತಂದಯೋಧ್ಯೆಗೆರಾಮಸೀತೆಗೆ ಕುಂದಣದಾರತೀಂiÀi್ಞ ಬೆಳಗೀರೆ ಶೋಭಾನೆ 3
--------------
ಗೋವಿಂದದಾಸ