ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧನಿ ಧನೀ ದಯದೋರೊ ಬ್ಯಾಗೆನ್ನ ಅನಾಥ ರಕ್ಷಕ ಬೇರ್ಯಾರೊ ಪ. ಜಲಜನಾಭ ನಿನ್ನಲಿ ಮನವಿರಿಸಲು ಸುಲಭವು ಮೋಕ್ಷಾಂತದ ಫಲವು ಎಂದು ತಿಳಿದುದು ನೀಯರಿದಿರೆ ದೀನನ ಇಂಥ ಫಲದಲಿ ತಳಮಳಗೊಳಿಸುವದ್ಯಾತಕೆ 1 ಆರಿಗೊರೆವದೀ ಕ್ರೂರವೇದನೆಯನ್ನು ಸೈರಿಸಲಾರೆನು ಸರ್ವೇಶ ಕಂಸಾರಿ ನೀ ಗತಿ ಎಂದು ಚೀರುವೆ ಚಿನ್ಮಯ ತ್ರಿಗುಣೇಶ 2 ಘೋರಾಪದ್ಗಣ ವಾರುಧಿಯೊಳಗೀಸ- ಲಾರದೆ ಮುಳುಗಿದೆ ಮಾರಮಣ ಪಾರಗಾಣಿಸದಿರೆ ದೂರು ನಿನಗೆ ಬಂದು ಸೇರದೆ ಬಿಡದು ವೆಂಕಟರಮಣ3
--------------
ತುಪಾಕಿ ವೆಂಕಟರಮಣಾಚಾರ್ಯ