ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತಾರೊ ನಿನ್ನಯ ಕರವಾರಿಜವನು ಕೃಷ್ಣ ಸಾರಿ ಬೇಡಿಕೊಂಬೆ ಮುರಾರಿ ದಯಮಾಡಿಪ ಮಾರಮಣನೆ ಸಂಸಾರ ಶರಧಿಯೊಳೀಸ ಲಾರದೆ ಬಳಲುತ ಚೀರೂತಲಿರುವೆ ಅ.ಪ ದಾರಾ ಪುತ್ರರೆನಗೆ ದಾರಿ ತೋರುವರೆಂದು ಮಾರ ಜನಕನೆ ಕೇಳೊ ಮೋರೆ ತೋರದೆ ಅವರು ಜಾರಿಕೊಂಡರಯ್ಯ ಭೂರಿ ಬಳಗದವರ್ಯಾರು ಬಾರರೊ ದೇವ 1 ಧಾರುಣಿ ಧನ ಧಾನ್ಯ ಹೇರಳವಾಗಿದೆ ಜೀವ ಹಾರಿ ಹೋಗುವಾಗ ಯಾರಿಲ್ಲವಯ್ಯ ಕೋರಿ ಭಜಿಪೆ ನಿನ್ನ ಬಾರಿ ಬಾರಿಗೆ ನಾನು ಕ್ಷೀರ ವಾರಿಧಿವಾಸ ವೀರ ಮಾರುತೀಶ 2 ಘೋರಾಂಧಕಾರದಿ ಮೇರೆಯು ಕಾಣದೆ ಮಿತಿ ಮೀರಿದ ಭಯದಿಂದ ಗಾರು ಪಡುತಿಹೆನೊ ಕಾರುಣ್ಯನಿಧಿಯೆ ನೀ ಪಾರು ಮಾಡದಿರೆ ಮತ್ತ್ಯಾರು ಕೇಳುವರೆನ್ನ ಶ್ರೀ ರಂಗೇಶವಿಠಲ 3
--------------
ರಂಗೇಶವಿಠಲದಾಸರು