ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಚಿಂತೆಯ ನೀಗಿದೆನೊ ಸಂತಸವಹಿಸಿದೆ ಕಂತುಪಿತ ನಿಮ್ಮ ಮಹಿಮಾಂತರಂಗದಿ ಅರಿತು ಪ ಭಾರ ನಿನ್ನಂದೆಂಬೊ ತರಳ ಪ್ರಹ್ಲಾದನ ಘೋರಸಂಕಟ ನಿವಾರಿಸಿದನ ಪಾದ ವಾರಿಜ ನಂಬಿದೆ ಆರಂಜಿಕೇನೆಂದು 1 ಕುರುಪನ ಸಭೆಯೊಳು ತರುಣೀಮಣಿಯು ತಾ ಚರಣಭಜಿಸಲಿನ್ನು ದುರಿತವ್ಯಾತದರೆಂದು 2 ಶಂಖಪಾಣಿಯಪಾದಪಂಕಜ ಧ್ಯಾನ ನಿ: ಶಂಕೆಯಿಂ ಗೈವರ ಸಂಕಟಹರ ನಿಜ ವೆಂಕಟ ಶ್ರೀರಾಮ ಕಿಂಕರರೊಡೆಯನೆಂದು 3
--------------
ರಾಮದಾಸರು