ಘೋರವಾರಾ ದುಃಖ ಪಾರಾವಾರಾವಿಲ್ಲ ಸಾಧುತಾ ಸಂಸಾರ ಪ
ನೀರ ಪೊಕ್ಕು ಬಾರಾ ಬೆನ್ನಿನಲಿ ಧರಾ
ಧಾರಿ ನರಹರಿ ಎನಿಸೆ ಅಸಾರ ಸಂಸಾರ
ಧಿಕ್ಕಾರವೆಂಬೇನೇ ಸುರಾರಿ ವೃಂದದ ಸಂಹಾರ ಕಾರಣ 1
ದಾನಾ ಬೇಡಿ ಮಾತಾ ಹಾನಿ ಮಾಡಿ ಸೀತಾ
ಮಾನಿ ಮಾನಿನಿಯುಳಿಸೆ
ಭೂನಾಥ ಶ್ರೀಯುತ ಭವದಾತನೆಂಬೆನೆ
ದಾನವರಾಂತಕ ದೀನರಪಾಲಕ 2
ಅರಿವೆಗ¼ಲ್ಲ್ಲಾ ಹರಿಯೇರಬಲ್ಲ
ನರಸಿಂಹವಿಠಲೆನಿಸಿ
ಅರಿವಲ್ಲ ಭವಗುಲ್ಲ ತಾಳಲ್ಲಿ ಎಂದೇನೆ
ಅರಿಭವಮಾರಕ
ಸುರಲೋಕದರ್ಶಕ ಸಾಧುತಾ ಸಂಸಾರ 3