ಬೇಡಧ್ಯಾನಿಸಿ ನೋಡು ಪ
ಭವ ಮುಳುಗಿ ನೀನಾರು ಅಲ್ಲಿ
ತಂದೆ ತಾಯಿಗಳು ಮತ್ತವರಾರು
ಅಂದಿನವನಿತೆಯಾಗಿಗಳಾರು ನಿನ್ನ
ನಂದನರೆನಿಸಿ ಬಂದವ ರಾರೋ 1
ಮುನ್ನ ಮಾಡಿದ ಹೊಲಮನೆಯೆಲ್ಲ ನಿನ್ನ
ಬೆನ್ನು ಬಂದಗ್ರಜಾನುಜರೆಲ್ಲ ಚೊಕ್ಕ
ಚಿನ್ನ ಚಿಗುರು ಬೆಳ್ಳಿ ನಗವೆಲ್ಲಿ ಪಶು
ಹೊನ್ನು ಕನಕ ಮಿತ್ರ ಜನರೆಲ್ಲ 2
ಇಂದಿನ ಭವದೊಳು ನಿನಗೆಲ್ಲಿ ಈಗ
ಬಂದು ಕೊಡಿದ ಸಂಸಾರವೆಲ್ಲಿ ಮುಂದೆ
ಹೊಂದಿ ಹುಟ್ಟುವ ಠಾವುಗಳೆಲ್ಲ ಅಲ್ಲಿ
ಬಂಧು ಬಳಗ ನೆರೆದಿಹುದೆಲ್ಲ 3
ಹಲಬರ ನೆರವಿಯ ದೇಹವಿದು ಹೊಳೆ
ಚಳಿಕ ತನ್ನಯ ಈ ಋಣ ತೀರುವುದು
ಎಲ್ಲ ಬಯಲಿಗೆ ಬಯಲಾಗಿ ಹೋಗುವುದು 4
ಸಾರವಿಲ್ಲದ ಸಂಸಾರವಿದು ನಿ
ಪರ ಕೆಡುತಿಹುದು ಈ
ಘೋರವನುಳಿದು ನಿರ್ಮಲನಹುದು ಲಕ್ಷ್ಮೀ
ಪಾದ ಕೊಡುವುದು5